ಪಾಕಿಸ್ತಾನದ ಅತ್ಯಂತ ಜನನಿಬಿಡ ನಗರವಾದ ಕರಾಚಿಯಲ್ಲಿರುವ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರಿನ ಕೊರತೆಯ ಬಗ್ಗೆ ಪಾಕಿಸ್ತಾನಿ ನಟಿ ಹಿನಾ ಬಯಾತ್ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಬಯಾತ್, “ಇಂದು ಯೂಮ್-ಎ-ತಕ್ಬೀರ್. ನಾನು ಇಲ್ಲಿ ಕರಾಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದೇನೆ, ಇಲ್ಲಿನ ಯಾವುದೇ ಶೌಚಾಲಯಗಳಲ್ಲಿ ನೀರಿಲ್ಲ . ಜನರು ಪ್ರಾರ್ಥನೆ ಮಾಡಲು ಬಯಸುತ್ತಾರೆ, ಪೋಷಕರು ತಮ್ಮ ಮಕ್ಕಳನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದಾರೆ – ಆದರೆ ನೀರಿಲ್ಲ” ಎಂದು ಹೇಳಿದರು.
ನಮ್ಮ ವಿಮಾನ ನಿಲ್ದಾಣಗಳು, ನಮ್ಮ ಸಂಸ್ಥೆಗಳು ಮತ್ತು ನಮ್ಮ ವ್ಯವಸ್ಥೆಗಳು ಏಕೆ ಇಷ್ಟೊಂದು ಹದಗೆಟ್ಟಿವೆ? ಮತ್ತು ಇವು ಸರಿಪಡಿಸಬೇಕಾದ ತಪ್ಪುಗಳು ಎಂದು ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಲವು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ, ಹೊಸ ರೈಲುಗಳ ಬಗ್ಗೆ ಚರ್ಚಿಸಲಾಗುತ್ತಿದೆ – ಆದರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯಗಳಲ್ಲಿ ನೀರಿನ ಲಭ್ಯತೆಯಂತಹ ಹಳೆಯ ವ್ಯವಸ್ಥೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ, “ಎಂದು ಅವರು ಹೇಳಿದರು.

