HomeLatest NewsGOOD NEWS : ಶೀಘ್ರವೇ 'PM ಕಿಸಾನ್' 20 ನೇ ಕಂತಿನ ಹಣ ರೈತರ ಖಾತೆಗೆ...

GOOD NEWS : ಶೀಘ್ರವೇ ‘PM ಕಿಸಾನ್’ 20 ನೇ ಕಂತಿನ ಹಣ ರೈತರ ಖಾತೆಗೆ ಜಮಾ, ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಅಂತ ಹೀಗೆ ಚೆಕ್ ಮಾಡಿ.!

ದೇಶದಾದ್ಯಂತ ರೈತರನ್ನು ಬೆಂಬಲಿಸಲು ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹ ರೈತರು ವರ್ಷಕ್ಕೆ ಮೂರು ಕಂತುಗಳಲ್ಲಿ ರೂ. 2,000 ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ.

ಈ ಯೋಜನೆಯ ಮೂಲಕ ಈಗಾಗಲೇ 19 ಕಂತಿನ ಹಣ ಕಳೆದ ಫೆಬ್ರವರಿ ತಿಂಗಳಿನಲ್ಲಿ ರೈತರ ಖಾತೆಗಳಲ್ಲಿ ಜಮವಾಗಿದೆ. ಈಗ 20 ನೇ ಕಂತಿನ ಹಜೂನ್ ತಿಂಗಳಿನಲ್ಲಿ ರೈತರ ಖಾತೆಗಳಲ್ಲಿ ಜಮ ಆಗಲಿದೆ. ಅರ್ಹ ರೈತರ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವವರ ಖಾತೆಗಳಲ್ಲಿ ಹಣ ಜಮೆಯಾಗುತ್ತದೆ. ನಿಮ್ಮ ಹೆಸರು ಪಟ್ಟಿಯಲ್ಲಿ ಹೆಸರುಂಟಾ..? ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಚೆಕ್ ಮಾಡಿ

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸಬೇಕು? ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಎಂ ಕಿಸಾನ್ ಯೋಜನಾ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಹೋಗಿ.
ವೆಬ್ಸೈಟ್ನ ‘ಫಾರ್ಮ್ಸ್ ಕಾರ್ನರ್’ ವಿಭಾಗವನ್ನು ಕ್ಲಿಕ್ ಮಾಡಿ.
‘ಬೆನಿಫಿಷಿಯರಿ ಪಟ್ಟಿ’ ಆಯ್ಕೆಯನ್ನು ಆರಿಸಿ.
ವಿವರಗಳನ್ನು ನೋಂದಾಯಿಸಿ:
ನಿಮ್ಮ ಜಿಲ್ಲೆ, ಗ್ರಾಮ, ಇತರ ಅಗತ್ಯ ವಿವರಗಳನ್ನು ನೋಂದಾಯಿಸಿ. ರಿಪೋರ್ಟ್ ಪಡೆದುಕೊಳ್ಳಿ
ದಾಖಲಾತಿ ಮಾಡಿದ ಮಾಹಿತಿ ಸರಿಯಾಗಿದೆ ಎಂದು ನಿರ್ಧರಿಸಿ,
‘ಗೆಟ್ ರಿಪೋರ್ಟ್’ ಬಟನ್ ಮೇಲೆ ಕ್ಲಿಕ್ ಮಾಡಿ. ಪಟ್ಟಿ ಪರಿಶೀಲಿಸಿ: ರಿಪೋರ್ಟ್ ಸ್ಕ್ರೀನ್ನಲ್ಲಿ ಗೋಚರಿಸುತ್ತದೆ, ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿ. ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ, ಅರ್ಜಿಯ ವಿವರಗಳಲ್ಲಿ ಯಾವುದೋ ತಪ್ಪು ಸಂಭವಿಸಿರಬಹುದು.

ರೈತರ ಕೆಲವು ಸಾಮಾನ್ಯ ತಪ್ಪಿನ ಕಾರಣದಿಂದ ಹಣ ಜಮಾ ಆಗುವುದಿಲ್ಲ. ಅವುಗಳನ್ನು ಗಮನಿಸಿ: ಆಧಾರ್ ಅಥವಾ ಮೊಬೈಲ್ ಸಂಖ್ಯೆ ಲಿಂಕ್ ಮಾಡದಿರುವುದು: ಆಧಾರ್ ಕಾರ್ಡ್ ಅಥವಾ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡದಿದ್ದರೆ ಹಣ ಜಮಾ ಕಾವು. ಆಧಾರ ಲಿಂಕ್ ಮಾಡುವುದು ಇ-ಕೆವೈಸಿಗೆ ಕಡ್ಡಾಯ. ತಪ್ಪು ವಿವರಗಳು: ರೈತ ತನ್ನ ಭೂಮಿ ಅಥವಾ ವೈಯಕ್ತಿಕ ವಿವರಗಳನ್ನು ತಪ್ಪಾಗಿ ದಾಖಲಿಸಿದರೆ ಹಣ ಜಮಾ ಮಾಡಲು ಸಾಧ್ಯವಿಲ್ಲ. ಮೊಬೈಲ್ ಸಂಖ್ಯೆ ಲಿಂಕ್: ಮೊಬೈಲ್ ಸಂಖ್ಯೆ ಲಿಂಕ್ ಮಾಡಿ, ಯೋಜನೆಗೆ ಸಂಬಂಧಿಸಿದ ಮಾಹಿತಿ SMS ರೂಪದಲ್ಲಿ ಬರುತ್ತದೆ.

ಏನು ಮಾಡಬೇಕು?
ನಿಮ್ಮ ಆಧಾರ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿ. ಇ-ಕೆವೈಸಿ ಪೂರ್ಣಗೊಳಿಸಿ. ಭೂಮಿ ಮತ್ತು ವೈಯಕ್ತಿಕ ವಿವರಗಳನ್ನು ನೋಡಿ. ಅಧಿಕೃತ ವೆಬ್ಸೈಟ್ನಲ್ಲಿನ ಹೆಲ್ಪ್ಲೈನ್ ಅಥವಾ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿ..

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular