HomeLatest NewsBIG NEWS: ಪತ್ನಿಯನ್ನು ಇರಿದು ಕೊಂದು ನಾಪತ್ತೆಯಾಗಿದ್ದ ಪತಿ ಅರೆಸ್ಟ್

BIG NEWS: ಪತ್ನಿಯನ್ನು ಇರಿದು ಕೊಂದು ನಾಪತ್ತೆಯಾಗಿದ್ದ ಪತಿ ಅರೆಸ್ಟ್

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿ ಪತ್ನಿಯನ್ನು 10 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ನಾಪತ್ತೆಯಾಗಿದ್ದ ಪತಿ ಮಹಾಶಯನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಅವಿನಾಶ್ (32) ಬಂಧಿತ ಆರೋಪಿ. ಪತ್ನಿ ಕೀರ್ತಿ (26)ಯನ್ನು ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಅವಿನಾಶ್ ಬಳಿಕ ನಾಪತ್ತೆಯಾಗಿದ್ದ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ಹತ್ಯೆ ಬಳಿಕ ಅವಿನಾಶ್ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಅವಿನಾಶ್ ಬಂಧನಕ್ಕಾಗಿ ಚಿಕ್ಕಮಗಳೂರು ಎಸ್ ಪಿ ವಿಕ್ರಂ ಆಮ್ಟೆ, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಚಿನ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಮುಳ್ಳಯ್ಯನಗಿರಿ ಕಾಡಿನಲ್ಲಿ ಅವಿತುಕುಳಿತಿದ್ದ ಅವಿನಾಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular