ಬೆಳಗಾವಿ: ಹಳ್ಳದಲ್ಲಿ ಎತ್ತಿನಗಾಡಿ ಮಗುಚಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿ ನಡೆದಿದೆ.
ಭಾರಿ ಮಳೆಯಿಂದ ದುರಂತ ಸಂಭವಿಸಿದೆ. ಎತ್ತಿನಗಾಡಿ ಮಗುಚಿ ಬಿದ್ದು ಇಬ್ಬರು ಮಕ್ಕಳು, ಒಂದು ಎತ್ತು ಸಾವನ್ನಪ್ಪಿದ್ದಾರೆ. ಗಣೇಶ ಕಾಂಬಳೆ(9), ದೀಪಕ್ ಕಾಂಬಳೆ(11) ಮೃತಪಟ್ಟವರು ಎಂದು ಹೇಳಲಾಗಿದೆ.
ಹಳ್ಳದಲ್ಲಿ ದಾರಿ ಕಾಣದೆ ಎತ್ತಿನ ಬಂಡಿ ಮಗುಚಿ ಬಿದ್ದಿದೆ. ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿತ್ತು. ಹಳ್ಳಕ್ಕೆ ಸೇತುವೆ ಇಲ್ಲದಿರುವುದರಿಂದ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.