ಬೆಳಗಾವಿ: ಮತ್ತೆ ಮಹಾಮಾರಿ ಕೊರಾನಾ ಸೋಂಕು ಹೆಚ್ಚಳವಾಗುತ್ತಿದೆ. ಅಲ್ಲಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ. ಇದರ ಬೆನ್ನಲ್ಲೇ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಕೋಡಿಶ್ರೀಗಳು, ವಿಶ್ವದಲ್ಲಿ ಮುಂದಿನ 5 ವರ್ಷಗಳ ಕಾಲ ಕೋವಿಡ್ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಕಾಡಲಿದೆ. ಜನರು ಹುಷಾರಾಗಿರಬೇಕು ಎಂದಿದ್ದಾರೆ.
ಜಗತ್ತಿಗೆ ವಾಯು, ಜಲದಿಂದ ಐದು ವರ್ಷಗಳ ಕಾಲ ಗಂಡಾಂತರವಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಿದೆ. ಮೇಘ ಸ್ಫೋಟವಾಗುವ ಸಾಧ್ಯತೆ ಇದೆ, ಭೂಕಂಪಗಳಾಗುವ ಸಾಧ್ಯತೆ ಇದೆ ಎಂದರು.
ಇನ್ನು ಮತೀಯ ಗಲಭೆ ಹೆಚ್ಚಾಗಲಿದೆ. ಯುದ್ಧದ ಭೀತಿ ಮತ್ತೆ ಆರಂಭವಾಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲ ದೇಶಗಳು ಅಳಿದು ಹೋಗಲಿವೆ. ಹೊಸ ಹ್ಸ ದೇಶಗಳು ಉತ್ಪತ್ತಿಯಾಗಲಿವೆ ಎಂದಿದ್ದಾರೆ.
ಹಲವು ರಾಜಕೀಯ ಮುಖಂಡರಿಗೆ ಸಾವಿದೆ. ಮುಂದಿನ ಸಂಕ್ರಾಂತಿವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿ ಬಳಿಕ ಏನಾಗಲಿದೆ ನೋಡಬೇಕು ಎಂದರು.