ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಚಲಿಸುತ್ತಿದ್ದ ಇ-ರಿಕ್ಷಾದಿಂದ ಜಿಗಿದಿದ್ದು, ಆಘಾತಕಾರಿ ವೀಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಇ-ರಿಕ್ಷಾ ಹತ್ತಿದ್ದಳು. ನಂತರ ಕಾಮುಕರು ಯುವತಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದರು. ನಂತರ ಕಾಮುಕರಿಂದ ತಪ್ಪಿಸಿಕೊಳ್ಳಲು ಅವಳು ಚಲಿಸುವ ರಿಕ್ಷಾದಿಂದ ಹಾರಿದಳು. ಇದೀಗ ಸಿಸಿಟಿವಿ ಕ್ಯಾಮೆರಾ ಕ್ಲಿಪ್ ವೈರಲ್ ಆಗಿದೆ.
ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ನಾಲ್ವರು ಯುವಕರಾದ ಅನುಜ್ ಗುಪ್ತಾ ಅಲಿಯಾಸ್ ಆಕಾಶ್, ರಂಜೀತ್ ಚೌಹಾಣ್ ಮತ್ತು ಅನಿಲ್ ಸಿನ್ಹಾ ಮತ್ತು ಫೈಜುಲ್ಲಾಗಂಜ್ ನಿವಾಸಿ ಇ-ರಿಕ್ಷಾ ಚಾಲಕ ಸತ್ಯಂ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
UP की राजधानी लखनऊ मे सडक पर चलती E रिक्शा मे नर्सिंग छात्रा के साथ अश्लीलता हुई तो वह इज़्ज़त बचाने की खातिर चलती रिक्शा से कूद गई। जिसकी CC कैमरे की क्लिप वायरल हुई है।
— TRUE STORY (@TrueStoryUP) May 23, 2025
पुलिस ने छात्रा के साथ अश्लीलता करने वाले 4 युवको अनुज गुप्ता उर्फ आकाश, रंजीत चौहान और अनिल सिन्हा के साथ E… pic.twitter.com/mvdZA7LPoG