HomeLive NewsBREAKING : ಬಾಗಲಕೋಟೆಯ ಅಡುಗೆ ಎಣ್ಣೆ ಮಿಲ್ ನಲ್ಲಿ ಬಾಯ್ಲರ್ ಸ್ಫೋಟ : ಕಾರ್ಮಿಕ ದುರ್ಮರಣ

BREAKING : ಬಾಗಲಕೋಟೆಯ ಅಡುಗೆ ಎಣ್ಣೆ ಮಿಲ್ ನಲ್ಲಿ ಬಾಯ್ಲರ್ ಸ್ಫೋಟ : ಕಾರ್ಮಿಕ ದುರ್ಮರಣ

ಬಾಗಲಕೋಟೆ: ಅಡುಗೆ ಎಣ್ಣೆ ಮಿಲ್ ನಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

ಇಲ್ಲಿನ ರಹಮತ್ ನಗರದಲ್ಲಿ ಅಡುಗೆ ಎಣ್ಣೆ ಮಿಲ್ ನ ಬಾಯ್ಲರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಫಿಕ್ ಸೈಯದ್ ಕುಡುಚಿ (35) ಮೃತ ಕಾರ್ಮಿಕ.

ಜಮಖಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular