ಬೆಂಗಳೂರು: ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಗಳಿಗೆ ಬಳಕೆದಾರರ ಶುಲ್ಕ ನಿಗದಿ ಮಾಡುವುದಿಲ್ಲ. ಮೆಟ್ರೋ ಸ್ವೈಪ್ ಗೇಟ್ ಒಳಗೆ ಇರುವ ಶೌಚಾಲಯಗಳ ಬಳಕೆ ಮುಂದೆಯೂ ಉಚಿತವಾಗಿಯೇ ಇರುತ್ತದೆ ಎಂದು ಬಿ.ಎಂ.ಆರ್.ಸಿ.ಎಲ್. ತಿಳಿಸಿದೆ.
ಮೆಟ್ರೋ ಸ್ವೈಪ್ ಗೇಟ್ ಗಿಂತ ಹೊರಗಿರುವ ಶೌಚಾಲಯಗಳನ್ನು ಮೆಟ್ರೋ ಪ್ರಯಾಣಿಕರಲ್ಲದೇ ಬೇರೆ ಸಾರ್ವಜನಿಕರೂ ಬಳಸುತ್ತಾರೆ. ಅದಕ್ಕಾಗಿ ಅವುಗಳಿಗಷ್ಟೇ ಶುಲ್ಕ ನಿಗದಿ ಮಾಡಲಾಗಿದೆ ಎಂದು BMRCL ಸ್ಪಷ್ಟಪಡಿಸಿದೆ.