ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮನು ಪತ್ನಿ ದಿವ್ಯಾ, ನನ್ನ ಪತಿ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮನು ಪತ್ನಿ ದಿವ್ಯಾ, ಮನು ಗೆಳತಿ ಬೇಕಂತಲೇ ಆರೋಪ ಮಾಡಿದ್ದಾಳೆ. ಇಷ್ಟು ದಿನ ನೀನು ಬೆಳೆಯಬೇಕು ಎಂದಿದ್ದವಳು ಈಗೇಕೆ ಆರೋಪ ಮಾಡುತ್ತಿದ್ದಾಳೆ? ಸಿನಿಮಾ ರಿಲೀಸ್ ಸಂದರ್ಭ ನೋಡಿಕೊಂಡೇ ಆಕೆ ಆರೋಪ ಮಾಡಿದ್ದಾರೆ. ಆಕೆ ಬೇರೆಯವರ ಬಗ್ಗೆಯೂ ಆರೋಪಿಸಿದ್ದಾಳೆ ಎಂದರು.
ನನ್ನ ಪತಿ ಹಾಗೂ ಆಕೆಯ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಪತಿಯ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ನಾನು ಯಾವ ಕಾರಣಕ್ಕೂ ನನ್ನ ಪತಿಯನ್ನು ಬಿಟ್ಟು ಕೊಡಲ್ಲ. ಅವರದ್ದು ಯಾವುದೇ ತಪ್ಪಿಲ್ಲ. ಇಷ್ಟು ದಿನ ಸುಮ್ಮನಿದ್ದು, ಈಗ ಸಿನಿಮಾ ಬಿಡುಗಡೆಯಾಗುವ ವೇಳೆಯೇ ಆಕೆ ಆರೋಪಿಸುತ್ತಿದ್ದಾಳೆ ಎಂದರೆ ಇದರ ಹಿಂದೆ ದುರುದ್ದೇಶ ಅಡಗಿದೆ ಎಂದಿದ್ದಾರೆ.
ಸಿನಿಮಾಗಾಗಿ ಮೂರು ವರ್ಷಗಳಿಂದ ನನ್ನ ಪತಿ ಕಷ್ಟಪಟ್ಟಿದ್ದಾರೆ. ನನ್ನ ಪತಿಗೆ ನ್ಯಾಯ ಸಿಗುವರೆಗೂ ನಾನು ಹೊರಾಡುತ್ತೇನೆ ಎಂದು ದಿವ್ಯಾ ತಿಳಿಸಿದ್ದಾರೆ.