ಬೆಂಗಳೂರು : ಎಂದಿಗೂ ನಾನು ಕನ್ನಡ ಮಾತನಾಡುವುದೇ ಇಲ್ಲʼ ಎಂದು ಬೆಂಗಳೂರಿನ ಚಂದಾಪುರದ ಎಸ್ಬಿಐ ಬ್ಯಾಂಕ್ ಲೇಡಿ ಮ್ಯಾನೇಜರ್ ದರ್ಪ ತೋರಿದ್ದರು. ಈ ವಿಡಿಯೋ ವೈರಲ್ ಭಾರಿ ವೈರಲ್ ಆಗಿದ್ದು, ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಹಿಳೆ ಕನ್ನಡಿಗರ ಕ್ಷಮೆ ಕೇಳಿದ್ದರು. ಅಲ್ಲದೇ ಕೊನೆಗೂ ಈ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು.
200 ಪದಗಳನ್ನು ಕಲಿಯುವುದು ಕಷ್ಟವೇ ಎಂದು ಕನ್ನಡ ಮಾತನಾಡಲ್ಲ ಎಂದ SBI ಮ್ಯಾನೇಜರ್ ವಿರುದ್ಧ ಮೋಹನದಾಸ್ ಪೈ ಗರಂ ಆಗಿದ್ದಾರೆ.
“ಪ್ರತಿಯೊಂದು ವ್ಯವಹಾರವು ತನ್ನ ಸ್ಥಳೀಯ ಗ್ರಾಹಕರಿಗೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಸೇವೆ ಸಲ್ಲಿಸಬೇಕು. ಇದು ಬ್ರಿಟಿಷ್ ರಾಜ್ಯ ಅಲ್ಲ. ಇದು ಸೇವಾ ವ್ಯವಹಾರ. ಮಾತನಾಡಲು 200 ಪದಗಳನ್ನು ಕಲಿಯುವುದು ಕಷ್ಟವೇ? ನಿಮ್ಮ ಗ್ರಾಹಕರಿಗೆ ಗೌರವ ತೋರಿಸಲು ಕೆಲವು ಪದಗಳನ್ನು ಕಲಿಯಿರಿ. ಅವರು ಗ್ರಾಹಕರು, ನಿಮ್ಮ ಬಂಧಿತ ಪ್ರಜೆಗಳಲ್ಲ. ದುರಹಂಕಾರದಿಂದ ಮೆರೆಯೋದು ತಪ್ಪು” ಎಂದು ಟ್ವೀಟ್ ಮಾಡಿದ್ದಾರೆ.
You are very very wrong. Every business must serve its local customers in a language they understand. This is not the British Raj again. This is a service business. Learning say 200 words to converse is difficult?nobody is asking anyone to read and write but converse, learn a few… https://t.co/ipxKUJKPZD
— Mohandas Pai (@TVMohandasPai) May 21, 2025
I’m once again saying, Come to Delhi, and don’t speak in Hindi if you don’t know/want, speak in English or sign language or whatever convenient. Nobody will be rude to you for not talking in Hindi. And certainly nobody would tell you that you came to delhi to beg. We know if you… pic.twitter.com/JeDvtiYgDS
— Madhur (@ThePlacardGuy) May 21, 2025