HomeLatest NewsBIG NEWS: ಪ್ರಧಾನಿ ಮೋದಿಯಿಂದ ಇಂದು ರಾಜ್ಯದ 5 ರೈಲು ನಿಲ್ದಾಣಗಳ ಲೋಕಾರ್ಪಣೆ

BIG NEWS: ಪ್ರಧಾನಿ ಮೋದಿಯಿಂದ ಇಂದು ರಾಜ್ಯದ 5 ರೈಲು ನಿಲ್ದಾಣಗಳ ಲೋಕಾರ್ಪಣೆ

ಬೆಂಗಳೂರು: ಇಂದು ರಾಜ್ಯದ 5 ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ ನಡೆಯಲಿದೆ. ಬಾಗಲಕೋಟೆ. ಧಾರಾವಾಡ, ಬೆಳಗಾವಿ ಜಿಲ್ಲೆ ಗೋಕಾಕ್, ಕೊಪ್ಪಳ ಜಿಲ್ಲೆ ಮುನಿರಾಬಾದ್, ಗದಗ ರೈಲ್ವೆ ನಿಲ್ದಾಣಗಳನ್ನು ವರ್ಚುಯಲ್ ಮೂಲಕ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಬಾಗಲಕೋಟೆ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ ಭಾಗವಹಿಸಲಿದ್ದಾರೆ. ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಈ ರೈಲು ನಿಲ್ದಾಣಗಳ ನವೀಕರಣ ಮಾಡಲಾಗಿದೆ. ದೇಶದ ಒಟ್ಟು 1275 ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದ್ದು, ಮೊದಲ ಹಂತವಾಗಿ ರಾಜ್ಯದ ಐದು ರೈಲು ನಿಲ್ದಾಣಗಳು ನವೀಕರಣಗೊಂಡಿವೆ.

ಈ ನಿಲ್ದಾಣಗಳಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಬಿಂಬಿಸಲಿದೆ. ರೈಲು ನಿಲ್ದಾಣಗಳ ಕಟ್ಟಡ ವಿನ್ಯಾಸವು ಆಯಾ ಪ್ರದೇಶದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ. ಪ್ರತಿ ನಿಲ್ದಾಣವು ಸೋಲಾರ್ ವಿದ್ಯುತ್ ಘಟಕ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶಾದ್ಯಂತ ಇಂದು 103 ನವೀಕೃತ ರೈಲು ನಿಲ್ದಾಣಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಈ ನಿಲ್ದಾಣಗಳನ್ನು ನಗರ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗಿದ್ದುಮ ವಿಶ್ರಾಂತಿ ಕೊಠಡಿಮ ವಿಶಾಲವಾದ ಸಂಚಾರ ಪ್ರದೇಶ ಇತರೆ ಸೌಲಭ್ಯ ಒದಗಿಸಲಾಗಿದೆ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಪಾರ್ಕಿಂಗ್ ಸೌಲಭ್ಯ, ಲಿಫ್ಟ್, ಪ್ರಯಾಣಿಕರು ಮತ್ತು ದಿವ್ಯಾಂಗ ಸ್ನೇಹಿ ಸೌಲಭ್ಯ ಕಲ್ಪಿಸಲಾಗಿದೆ. ಬಹು ಮಾದರಿ ಸಂಪರ್ಕದ ಏಕೀಕರಣದೊಂದಿಗೆ ಈ ನಿಲ್ದಾಣಗಳು ಈ ಪ್ರದೇಶದ ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಲಿವೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular