ಕಾನ್ಪುರ: ಮಹಿಳೆಯೊಬ್ಬರು ಸೋದರಳಿಯನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಲಕ್ಷ್ಮಣ ಖೇಡಾ ಗ್ರಾಮದಲ್ಲಿ ನಡೆದಿದೆ.
ಸೋದರಳಿಯನ ಜೊತೆಯೇ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ, ಪತಿಯನ್ನು ಹತ್ಯೆಗೈದು, ಕೊಲೆ ಆರೋಪವನ್ನು ಪಕ್ಕದ ಮನೆಯವರ ಮೇಲೆ ಹೊರಿಸಿದ್ದಳು. ಟ್ರ್ಯಾಕ್ಟರ್ ಮಾಲೀಕ ಧೀರೇಂದ್ರ ಕೊಲೆಯಾದ ದುರ್ದೈವಿ.
ಮೃತನ ಪತ್ನಿ ರೀನಾ ಪಕ್ಕದ ಮನೆಯ ತಂದೆ-ಮಗ ಕೀರ್ತಿ ಯಾದವ್ ಹಾಗೂ ಅವರ ಮಕ್ಕಳಾದ ರವಿ ಮತ್ತು ರಾಜು ತನ್ನ ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಳು. ಮಹಿಳೆ ಆರೋಪಕ್ಕೆ ಸಂಬಂಧಿಸಿಂದಂತೆ ಪಕ್ಕದ ಮನೆಯ ಮೂವರು ಜೈಲುಪಾಲಾಗಿದ್ದರು.
ಆದರೆ ಪೊಲಿಸ್ ತನಿಖೆಯಲ್ಲಿ ವಿಚಾರಣೆ ವೇಳೆ ಮಹಿಳೆ ರೀನಾಳ ಸೋದರಳಿಯ ತಪ್ಪೊಪ್ಪಿಕೊಂಡಿದ್ದು, ಧೀರೇಂದ್ರನನ್ನು ತಾವೇ ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ರೀನಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರೀನಾ ಹಾಗೂ ಆಕೆಯ ಸೋದರಳಿಯ ಇಬ್ಬರೂ ಪ್ಲಾನ್ ಮಾಡಿ ಧೀರೇಂದ್ರನನ್ನು ಹತ್ಯೆಗೈದಿರುವುದು ಖಚಿತವಾಗಿದೆ.