70 ರ ಹರೆಯದ ಕಮಲ್ 41 ರ ತ್ರಿಶಾ ನಡುವಿನ ರೊಮ್ಯಾನ್ಸ್ : ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರ ತಕರಾರು !

ಕಮಲ್ ಹಾಸನ್ ಅವರ ಬಹುನಿರೀಕ್ಷಿತ ಚಿತ್ರ ʼಥಗ್ ಲೈಫ್‌ʼ ನ ಟ್ರೇಲರ್ ಮೇ 17 ರಂದು ಬಿಡುಗಡೆಯಾದಾಗಿನಿಂದಲೂ ಸಂಚಲನ ಮೂಡಿಸುತ್ತಿದೆ. ಅನೇಕ ಅಭಿಮಾನಿಗಳು ಹಿರಿಯ ನಟನನ್ನು ಮತ್ತೆ ಆಕ್ಷನ್‌ನಲ್ಲಿ ನೋಡಿ ರೋಮಾಂಚಿತರಾಗಿದ್ದರೂ, ಒಂದು ನಿರ್ದಿಷ್ಟ ದೃಶ್ಯವು ಆನ್‌ಲೈನ್‌ನಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ – 70 ವರ್ಷದ ಕಮಲ್ ಹಾಸನ್ ಮತ್ತು ಸಹನಟಿ ತ್ರಿಶಾ ಕೃಷ್ಣನ್ ನಡುವಿನ ಪ್ರಣಯ ಸನ್ನಿವೇಶ.

ಈ ದೃಶ್ಯವನ್ನು ಟೀಕಿಸಿ ಮತ್ತು ನಟರ ನಡುವಿನ ಗಮನಾರ್ಹ ವಯಸ್ಸಿನ ಅಂತರವನ್ನು ಎತ್ತಿ ತೋರಿಸಿರುವ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಕಮಲ್ ಮತ್ತು ತ್ರಿಶಾ ಆಪ್ತವಾಗಿರುವ ಟ್ರೇಲರ್‌ನ ಸ್ಕ್ರೀನ್‌ಶಾಟ್ ಮತ್ತು ಹಿಂದಿನ ಚಿತ್ರದಲ್ಲಿ‌ ಕಮಲ್ ಹಾಸನ್ ನಟಿ ಅಭಿರಾಮಿ ಅವರನ್ನು ಚುಂಬಿಸುತ್ತಿರುವ ಹಳೆಯ ಚಿತ್ರವನ್ನು ಒಳಗೊಂಡಿದೆ. ಶೀರ್ಷಿಕೆಯಲ್ಲಿ, “ನೋ ಗಾಡ್, ಪ್ಲೀಸ್ ನೋ” ಎಂದು ಬರೆಯಲಾಗಿದೆ.

ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು

ಬಳಕೆದಾರರಿಂದ ವಿರೋಧದಿಂದ ಹಿಡಿದು ಸಮರ್ಥನೆಯವರೆಗೆ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ: “ತ್ರಿಶಾ, ಶ್ರುತಿ ಹಾಸನ್‌ಗಿಂತ ಕೇವಲ ಮೂರು ವರ್ಷ ದೊಡ್ಡವರು” ಎಂದು ಒಬ್ಬ ಬಳಕೆದಾರರು ಗಮನಸೆಳೆದರು. ಮತ್ತೊಬ್ಬರು ವ್ಯಂಗ್ಯವಾಗಿ “ಅವರ ಮಗಳ ವಯಸ್ಸು ಮಾತ್ರ – ಪ್ರಾಯೋಗಿಕವಾಗಿ ಆತ್ಮೀಯ ಗೆಳೆಯರು” ಎಂದಿದ್ದಾರೆ.

ಆದರೆ ಮೂರನೇ ಬಳಕೆದಾರರು ದೃಶ್ಯವನ್ನು ಸಮರ್ಥಿಸಿಕೊಂಡು “ಇದು ಕೇವಲ ನಟನೆ. ಕಥೆಗೆ ಅಗತ್ಯವಿದ್ದರೆ, ಅದರಲ್ಲಿ ತಪ್ಪೇನಿಲ್ಲ. ಮಕ್ಕಳಂತೆ ವರ್ತಿಸಬೇಡಿ” ಎಂದು ಹೇಳಿದ್ದಾರೆ.

ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ ಮಣಿರತ್ನಂ ನಿರ್ದೇಶನದ ʼಥಗ್ ಲೈಫ್ʼ ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ಸಿಲಂಬರಸನ್, ತ್ರಿಶಾ ಕೃಷ್ಣನ್, ಸಾನಿಯಾ ಮಲ್ಹೋತ್ರಾ, ಅಭಿರಾಮಿ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೊಜು ಜಾರ್ಜ್, ನಾಸರ್, ಅಲಿ ಫಜಲ್, ಪಂಕಜ್ ತ್ರಿಪಾಠಿ, ರೋಹಿತ್ ಸರಫ್ ಮತ್ತು ವೈಯಾಪುರಿ ನಟಿಸಿದ್ದಾರೆ. ಆಕ್ಷನ್-ಪ್ಯಾಕ್ಡ್ ಡ್ರಾಮಾ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read