BIG NEWS : ಬೆಂಗಳೂರಿನ ‘ವಾಹನ ಸವಾರ’ರೇ ಗಮನಿಸಿ :  ‘ಹೆಬ್ಬಾಳ ಫ್ಲೈಓವರ್’ ನಲ್ಲಿ ಇಂದಿನಿಂದ 5 ದಿನ ಸಂಚಾರ ನಿಷೇಧ

ಬೆಂಗಳೂರು : ಬೆಂಗಳೂರಿನ ವಾಹನ ಸವಾರರೇ ಗಮನಿಸಿ ಹೆಬ್ಬಾಳ ಫ್ಲೈ ಓವರ್ ನಲ್ಲಿ ಇಂದಿನಿಂದ 5 ದಿನ ವಾಹನ ಸಂಚಾರ ನಿಷೇಧಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್.ಪುರ ಕಡೆಯಿಂದ ಮೇಖಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸ್ತುವೆಗೆ ಹೆಚ್ಚುವರಿ ಕ್ಯಾಂಪ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುತ್ತದೆ. ಈ ಕಾಮಗಾರಿಯ ಭಾಗವಾಗಿ, ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 07 ಉಕ್ಕಿನ ಗರ್ಡ‌ರ್ಗಳನ್ನು ಅಳವಡಿಸುವ ಕಾಮಗಾರಿಯನ್ನು ದಿನಾಂಕ:17.05.2025 ರಿಂದ 21.05.2025 ರವರೆಗೆ ಪ್ರತಿದಿನ 3 ಗಂಟೆಗಳ ಕಾಲ ರಾತ್ರಿ 12:00 ರಿಂದ ಬೆಳಗಿನ ಜಾವ 03:00 ರವರೆಗೆ ಕೈಗೊಂಡಿರುತ್ತದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.

ಸಂಚಾರ ನಿರ್ಬಂಧ:
ಹೆಬ್ಬಾಳ ಮೇಲೇತುವೆಯಲ್ಲಿ ಎಸ್ಟೀಮ್ ಮಾಲ್ ನಿಂದ ಮೇಖಿ ವೃತ್ತದ ಕಡೆಗೆ ರಾತ್ರಿ 12:00 ರಿಂದ ಬೆಳಿಗ್ಗೆ 3:00 ರವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗ:
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ, ಮೂಲಕ ಮೇಖಿ ವೃತ್ತವನ್ನು ತಲುಪಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read