ಚಿಕ್ಕಬಳ್ಳಾಪುರ : ಲಂಚ ಪಡೆಯುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿ, ವಾಹನ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಉಪ ವಲಯ ಅರಣ್ಯಧಿಕಾರಿ ಧನಲಕ್ಷ್ಮೀ ಹಾಗೂ ವಾಹನ ಚಾಲಕ ಮಣಿಕಂಠ ಎಂಬುವವರು ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.
ರೈತರೊಬ್ಬರು ಚಿಂತಾಮಣಿ ತಾಲೂಕಿನ ಶ್ರೀನಿವಾಸಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪೆಟ್ರೋಲ್ ಬಂಕ್ ಬಳಿ ಇರುವ ಮರಗಳು ಕಟಾವು ಮಾಡಲು ಅನುಮತಿ ಕೋರಿದ್ದರು. ಇದಕ್ಕೆ 50 ಸಾವಿರ ರೂ.ಹಣಕ್ಕೆ ಬೇಡಿಕೆ ಇಟ್ಟಿದ್ದು 15 ಸಾವಿರ ರೂ.ಹಣ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಆಂಟೋನಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
TAGGED:ಲೋಕಾಯುಕ್ತ ಬಲೆಗೆ