ಉಡುಪಿ: ಬಿಗ್ ಬಾಸ್ ಸೀಜನ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗೆ ಶ್ರೀಕಾಂತ್ ಕಶ್ಯಪ್ ಜೊತೆ ವಿವಾಹವಾಗಿದ್ದು, ಮಗಳ ವಿರುದ್ಧವೇ ತಂದೆ ಬಾಲಕೃಷ್ಣ ನಾಯ್ಕ್ ಸಾಲು ಸಾಲು ಆರೋಪ ಮಾಡಿದ್ದಾರೆ.
ಮಗಳ ಮದುವೆಯನ್ನು ನಾನು ಒಪ್ಪಲಾರೆ. ನನಗೆ ಸರಿಯಾಗಿ ಆಮಂತ್ರಣವನ್ನೂ ನೀಡಿಲ್ಲ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರೇ. ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾರೆ. ಹಣದ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗೋವಿಂದ ಪೂಜಾರಿ ಪ್ರಕರಣದಲ್ಲಿಯೂ ಇವರು ಹಣ ಹಂಚಿಕೊಂಡಿದ್ದಾರೆ. ಚೈತ್ರಾ ಬಿಗ್ ಬಾಸ್ ಗೆ ಹೋಗುವ ವಿಚಾರವನ್ನೂ ನನಗೆ ಹೇಳಿಲ್ಲ. ನನ್ನನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಅಮ್ಮ-ಮಗಳು ಹೋಗಿದ್ದರು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ. ತಂದೆಗೆ ಅನ್ನ ಹಾಕದ ಮಗಳು ಏನು ದೇಶ ಸೇವೆ ಮಾಡ್ತಾಳೆ? ತಂದೆಯನ್ನು ದೂರವಿಟ್ಟು ಸಂಸ್ಕೃತಿಯ ಬಗ್ಗೆ ಮಾತನಡುವುದು ಎಷ್ಟು ಸರಿ? ಎಂದು ಪ್ರಸ್ನಿಸಿದ್ದಾರೆ.
ಗೋವಿಂದ ಪೂಜಾರಿ ಪ್ರಕರಣದಲ್ಲಿ ಈಕೆ ಹಣ ಹೊಡೆದಿದ್ದಾಳೆ. ಹಣವನ್ನು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಿದ್ದಾಳೆ. ಪಡ್ಡೆ ಹುಡುಗರ ಹೆಸರಲ್ಲಿಯೂ ಡೆಪೆಸಿಟ್ ಮಾಡಿದ್ದಾಳೆ. ಬಾಂಡ್ ಮೇಲೆ ಸಾಲ ಪಡೆದಿದ್ದಾಳೆ. ನಾನೇ ಮನೆ ನಡೆಸುತ್ತೇನೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾಳೆ.
ಸೈನಿಕರಿಗೆ ಹಣ ಕೊಟ್ಟಿದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಅದು ಹೆಮ್ಮೆಯ ವಿಷಯ ಆಗುತ್ತಿತ್ತು. ಮೋಸದ ಹಣದಲ್ಲಿ ಕೊಟ್ಟು ಏನು ಪ್ರಯೋಜನ? ಎಂದು ಕೇಳಿದ್ದಾರೆ.
ಚೈತ್ರ ಪತಿ ನಮ್ಮ ಮನೆಯಲ್ಲಿ ಇದ್ದವನು. ಆತನೂ ಕೂಡ ದೊಡ್ಡ ಕಳ್ಳ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಲರೇ. ಈಗ ನನ್ನ ಹೆಂಡತಿಯೂ ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದಿದ್ದಾರೆ.
ನಾನು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ನನ್ನ ದೊಡ್ಡ ಮಗಳೇ ಆಸರೆಯಾಗಿದ್ದಾಳೆ. ಆಕೆ ಶಾಲೆ ಕೆಲಸ ಮಾಡಿಕೊಂಡು, ಹೊಲಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ನನ್ನ ದೊಡ್ದ ಮಗಳ ಮೇಲೆ ಚೈತ್ರಾ ಸುಳ್ಳು ಅಪವಾದ ಮಾಡಿದ್ದಳು. ಚೈತ್ರಾ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.