ಒಡಿಶಾದ ಪಾರಾದೀಪ್ ಬಂದರಿಗೆ ಪಾಕಿಸ್ತಾನ ಸಿಬ್ಬಂದಿಗಳಿರುವ ಹಡಗು ಕಚ್ಚಾತೈಲ ಹೊತ್ತು ತಂದಿದ್ದು, ಬಂದರಿನಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.
ಒಟ್ಟು 25 ಸಿಬ್ಬಂದಿಗಳಿರುವ MT Siren II ಹಡಗು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗಾಗಿ ಕಚ್ಚಾತೈಲ ಹೊತ್ತು ತಂದಿದೆ. ಈ ಹಡಗು ದಕ್ಷಿಣ ಕೊರಿಯಾದಿಂದ ಸಿಂಗಪುರ ಮಾರ್ಗವಾಗಿ ಒಡಿಶಾ ಬಂದರು ತಲುಪಿದೆ. ಇದರಲ್ಲಿರುವ 25 ಸಿಬ್ಬಂದಿಗಳಲ್ಲಿ 21 ಸಿಬ್ಬಂದಿಗಳು ಪಾಕಿಸ್ತಾನಿ ಪ್ರಜೆಗಳು
ವಲಸೆ ಇಲಾಖೆ ಹಡಗಿನಲ್ಲಿ ಪಾಕಿಸ್ತಾನಿ ಸಿಬ್ಬಂದಿಗಳು ಇರುವ ಕುರಿತು ಮಾಹಿತಿ ನೀಡಿದ ಕಾರಣ ಒಡಿಶಾ ಕರಾವಳಿ ಪೊಲೀಸ್ ಮತ್ತು ಸಿಐಎಸ್ ಎಫ್ ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಇದೀಗ ಬಂದರಿಗೆ ಪಾಕಿಸ್ತಾನಿ ಸಿಬ್ಬಂದಿಗಳಿರುವ ಹಡಗು ಬಂದಿರುವ ಬೆನ್ನಲ್ಲೇ ಬಂದರಿನಲ್ಲಿ ಹೈ ಅಲರ್ಟ್ ಕೈಗೊಳ್ಳಲಾಗಿದೆ.