ಮುಂಬೈ: ಮರಾಠಿಯಲ್ಲಿ ಮಾತನಾಡುವಂತೆ ಪಿಜ್ಜಾ ಡೆಲಿವರಿ ಬಾಯ್ ಗೆ ದಂಪತಿ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಮುಬೈ ಉಪನಗರದ ಭಾಂಡಪ್ ನಲ್ಲಿರುವ ಸಾಯಿ ರಾಧೆ ಕಟ್ತಡದಲ್ಲಿ ಈ ಘಟನೆ ನಡೆದಿದೆ. ಫಿಜ್ಜಾ ಡೆಲಿವರಿ ಬಾಯ್ ಆರ್ಡರ್ ಕೊಡಲೆಂಡು ರೋಹಿತ್ ಲಾವಾರೆ ಅವರ ಮನೆಗೆ ಹೋಗಿದ್ದಾರೆ. ಈ ವೇಳೆ ರೋಹಿತ್ ಲಾವಾರೆ ದಂಪತಿ ಆತನಿಗೆ ಮರಾಠಿಯಲ್ಲಿ ಮಾತನಾಡು ಎಂದಿದ್ದಾರೆ. ಮರಾಠಿಯಲ್ಲಿ ಮಾತನಾಡದಿದ್ದರೆ ಹಣ ಕೊಡಲ್ಲ ಎಂದು ಬೆದರಿಸಿದ್ದಾರೆ.
ಮರಾಠಿಯಲ್ಲಿಯೇ ಮಾತನಾಡಬೇಕು ಎಂದಿದೆಯೇ? ಯಾಕೆ ಎಂದು ಡೆಲಿವರಿ ಬಾಯ್ ಪ್ರಶ್ನಿಸಿದ್ದಕ್ಕೆ ದಂಪತಿ ಹೌದು. ಇಲ್ಲಿ ಹಾಗೆಯೇ ನಿಯಮ ಇದೆ ಎಂದು ಧಮ್ಕಿ ಹಾಕಿದ್ದಾರೆ. ಮರಾಠಿ ವಿಚಾರವಾಗಿ ದಂಪತಿ ಧಮ್ಕಿ ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮರಾಠಿ ಮಾತನಾಡದ ಕಾರಣಕ್ಕೆ ದಂಪತಿ ಪಿಜ್ಜಾ ಡೆಲಿವರಿ ಬಾಯ್ ಗೆ ಹಣ ಪಾವತಿಸಿಲ್ಲ. ಆತ ಬರಿಗೈಲಿ ವಾಪಾಸ್ ಆಗಿದ್ದಾನೆ ಎಂದು ತಿಳಿದುಬಂದಿದೆ.