ಗುವಾಹಟಿ: 2025 ರ ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಭರ್ಜರಿ ಜಯ ಸಾಧಿಸಿದ್ದು, ರಾಜ್ಯದಲ್ಲಿ ತನ್ನ ರಾಜಕೀಯ ಪ್ರಾಬಲ್ಯವನ್ನು ಬಲಪಡಿಸಿದೆ.
ನಿರ್ಣಾಯಕ ಬಲ ಪ್ರದರ್ಶನದಲ್ಲಿ, ಮೈತ್ರಿಕೂಟವು 376 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ 300 ಸ್ಥಾನಗಳನ್ನು ಪಡೆದುಕೊಂಡಿದ್ದು, ಶೇಕಡ 76 ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿದೆ.
ಈ ಅದ್ಭುತ ಗೆಲುವು ಮೈತ್ರಿಕೂಟದ ವ್ಯಾಪಕವಾದ ತಳಮಟ್ಟದ ಬೆಂಬಲವನ್ನು ಪ್ರತಿಬಿಂಬಿಸುವುದಲ್ಲದೆ, ಅದರ ಆಡಳಿತ ಮಾದರಿಯಲ್ಲಿ ಮತದಾರರ ಬೆಳೆಯುತ್ತಿರುವ ವಿಶ್ವಾಸವನ್ನು ಒತ್ತಿಹೇಳುತ್ತದೆ. ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲು ಬಹುಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಈ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 66 ರಷ್ಟು ಗಣನೀಯ ಮತ ಹಂಚಿಕೆಯೊಂದಿಗೆ, ಎನ್‌ಡಿಎ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ತನ್ನ ಬಲವಾದ ನೆಲೆಯನ್ನು ಪ್ರದರ್ಶಿಸಿದೆ. ಈ ಉತ್ತಮ ಸಾಧನೆಯು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ 2026ರ ರಾಜ್ಯ ವಿಧಾನಸಭಾ ಚುನಾವಣೆಗೆ ಶಕ್ತಿ ನೀಡಿದಂತಾಗಿದೆ.
ಈ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ, ಪ್ರಚಾರದ ಸಮಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಬಿಜೆಪಿ ನಾಯಕರಾದ ಜೆ.ಪಿ. ನಡ್ಡಾ, ಅಮಿತ್ ಶಾ ಮತ್ತು ಬಿ.ಎಲ್. ಸಂತೋಷ್ ಅವರಿಗೆ ಸಿಎಂ ಶರ್ಮಾ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
NDA sweeps Assam Panchayat Polls 2025, CM Sarma thanks voters for resounding mandate
— ANI Digital (@ani_digital) May 13, 2025
Read @ANI Story | https://t.co/vcQH2Qk61N#CMHimantaSarma #NDA #PanchayatPolls #Assam pic.twitter.com/NTyYMWCLHf