ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಅಬ್ಬರ ; ಗೋ ಗೋ ಸರಣಿ ಸೂಪರ್ ಹಿಟ್ | Video

ನವದೆಹಲಿ: ಭಾರತದ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಜಾಜ್ ಆಟೋ, ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲೂ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಫೆಬ್ರವರಿಯಲ್ಲಿ ‘ಗೋ ಗೋ’ ಸರಣಿಯನ್ನು ಬಿಡುಗಡೆ ಮಾಡಿದ ಕಂಪನಿಯು, ಈಗ ಕೇವಲ ಎರಡು ತಿಂಗಳಲ್ಲಿ ಶೇಕಡಾ 36 ರಷ್ಟು ಮಾರುಕಟ್ಟೆ ಪಾಲನ್ನು ಪಡೆದು ಅಗ್ರಸ್ಥಾನಕ್ಕೇರಿದೆ. ಈ ಯಶಸ್ಸಿಗೆ ಪ್ರಮುಖ ಕಾರಣ ‘ಬಜಾಜ್ ಗೋ ಗೋ ಪಿ7012’ ಮಾದರಿ.

ವಾಹನ ಪೋರ್ಟಲ್‌ನ ವರದಿಗಳ ಪ್ರಕಾರ, ಬಜಾಜ್ ಆಟೋ ತನ್ನ ಗೋ ಗೋ ಬ್ರ್ಯಾಂಡ್‌ನ ಅಡಿಯಲ್ಲಿ ಪ್ಯಾಸೆಂಜರ್ ಮತ್ತು ಸರಕು ಸಾಗಣೆ ವಿಭಾಗಗಳಲ್ಲಿ ಒಟ್ಟು 5,506 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಪಿ7012 ಮಾದರಿಯು ಅತಿ ಹೆಚ್ಚು ಮಾರಾಟವಾಗಿ ಬ್ರ್ಯಾಂಡ್‌ನ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದೆ.

ಈ ಸಾಧನೆಯ ಕುರಿತು ಬಜಾಜ್ ಆಟೋ ಲಿಮಿಟೆಡ್‌ನ ಅಧ್ಯಕ್ಷ ಸಮರ್ದೀಪ್ ಸುಬಂಧ್ ಮಾತನಾಡಿ, “ಗೋ ಗೋ ಸರಣಿಯ ಬಿಡುಗಡೆಯಾದ ಕೇವಲ ಎರಡು ತಿಂಗಳಲ್ಲಿ ನಾವು ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಲಯದಲ್ಲಿ ಶೇಕಡಾ 36 ರಷ್ಟು ಮತ್ತು ಪ್ಯಾಸೆಂಜರ್ ವಿಭಾಗದಲ್ಲಿ ಶೇಕಡಾ 39 ರಷ್ಟು ಮಾರುಕಟ್ಟೆ ಪಾಲನ್ನು ಪಡೆದಿದ್ದೇವೆ. ಇದು ನಮ್ಮ ಉತ್ಪನ್ನದ ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಬಜಾಜ್ ಬ್ರ್ಯಾಂಡ್ ಮೇಲಿನ ಜನರ ವಿಶ್ವಾಸವನ್ನು ತೋರಿಸುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬಜಾಜ್ ಗೋ ಗೋ ಸರಣಿಯಲ್ಲಿ ಪಿ5009, ಪಿ5012 ಮತ್ತು ಪಿ7012 ಎಂಬ ಮೂರು ಮಾದರಿಗಳಿವೆ. ಈ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ. ವಿಶೇಷವಾಗಿ ಪಿ7012 ಮಾದರಿಯು ಒಂದೇ ಚಾರ್ಜ್‌ನಲ್ಲಿ 251 ಕಿಮೀ ವರೆಗಿನ ರೇಂಜ್ ನೀಡುತ್ತದೆ. ಅಲ್ಲದೆ, ಈ ವಿಭಾಗದಲ್ಲಿ ಮೊದಲ ಬಾರಿಗೆ ಎರಡು-ಸ್ಪೀಡ್ ಆಟೋಮೇಟೆಡ್ ಟ್ರಾನ್ಸ್‌ಮಿಷನ್, ಆಟೋ ಹಜಾರ್ಡ್, ಆಂಟಿ-ರೋಲ್ ಡಿಟೆಕ್ಷನ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಬಜಾಜ್ ಗೋ ಗೋ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಬೆಲೆ ₹ 3.27 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ, ಹೆಚ್ಚು ಮಾರಾಟವಾಗುವ ಪಿ7012 ಮಾದರಿಯ ಬೆಲೆ ₹ 3.83 ಲಕ್ಷ (ಎಕ್ಸ್-ಶೋರೂಮ್).

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read