ಮೇ 13 ಮತ್ತು 17, 2025 ರಂದು ಮೆಟ್ರೋ ಎಂದಿನಂತೆ ಸೇವೆಗಳನ್ನು ನಿರ್ವಹಿಸಲಿದೆ. ಆ ದಿನಾಂಕಗಳಲ್ಲಿ ನಿರ್ಧರಿಸಲಾಗಿದ್ದ ವಿಸ್ತರಿತ ಸೇವೆಗಳನ್ನು ರದ್ದುಪಡಿಸಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಐಪಿಎಲ್ ಪಂದ್ಯಗಳನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಕಟಿಸಿದಂತೆ ರಾತ್ರಿ 1:30 ರವರೆಗೆ ವಿಸ್ತರಿಸಿದ ಮೆಟ್ರೋ ರೈಲು ಸೇವೆಗಳ ಸಮಯವನ್ನು, ಮೇ 13 ಮತ್ತು 17, 2025 ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿ.ಎಂ.ಆರ್.ಸಿ.ಎಲ್) ರದ್ದುಪಡಿಸಿದೆ. ಹೀಗಾಗಿ, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಸಾಮಾನ್ಯ ಸೇವೆ ವೇಳಾಪಟ್ಟಿಗೆ ಅನುಸಾರವಾಗಿ ನಿರ್ವಹಿಸಲಾಗುವುದು.
ಇದರಂತೆ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಹಾಗೂ ಮುಂದಿನ ಮಾಹಿತಿಗಾಗಿ ಅಧಿಕೃತ ಬಿ.ಎಂ.ಆರ್.ಸಿ.ಎಲ್ ವೆಬ್ರಿಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುವಂತೆ ವಿನಂತಿಸಲಾಗಿದೆ.
ಮೇ 13 ಮತ್ತು 17, 2025 ರಂದು #BMRCL ಎಂದಿನಂತೆ ಸೇವೆಗಳನ್ನು ನಿರ್ವಹಿಸಲಿದೆ. ಆ ದಿನಾಂಕಗಳಲ್ಲಿ ನಿರ್ಧರಿಸಲಾಗಿದ್ದ, ವಿಸ್ತರಿತ ಸೇವೆಗಳನ್ನು ರದ್ದುಪಡಿಸಲಾಗಿದೆ, ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/DN5VyvKYVP
— ನಮ್ಮ ಮೆಟ್ರೋ (@OfficialBMRCL) May 12, 2025