ಮಂಗಳೂರು: ಗ್ರಾಮ ಪಂಚಾಯಿತಿ ಉಪಾಧ್ಯಕ್ಷನೊಬ್ಬ ಮಹಿಳೆಗೆ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ನಡೆದಿದೆ.
ಇಡ್ಕಿದು ಗ್ರಾಮದ ಉಪಾಧ್ಯಕ್ಷ ಪದ್ಮನಾಭ ಸಾಪಲ್ಯ ಮಹಿಳೆಗೆ ಸಾರ್ವಜನಿಕವಾಗಿ ಗುಪ್ತಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಮಹಿಳೆ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲಿ ತನ್ನ ಮನೆಗೆ ಬರುವ ದಾರಿಯಲ್ಲಿ ಯಾರೋ ಕೆಲಸ ಮಾಡುತ್ತಿದ್ದ ಶಬ್ದ ಕೇಳಿ ಬಂತು. ಹಾಗಾಗಿ ಸ್ಥಳಕ್ಕೆ ಹೋಗಿ ಪ್ರಶ್ನಿಸಿ, ವಿಡಿಯೋ ಮಾಡುತ್ತಿದ್ದೆ. ಈ ವೇಳೆ ಪದ್ಮನಾಭ ಸಾಪಲ್ಯ ತನ್ನ ಚಡ್ಡಿ ಕೆಳಗೆ ಜಾರಿಸಿ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಪದ್ಮನಾಭ ಸಾಪಲ್ಯ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಬಿಜೆಪಿ ತನ್ನ ಪಕ್ಷದಿಂದ ಆತನನ್ನು ಉಚ್ಛಾಟನೆ ಮಾಡಿದೆ. ಬಿಜೆಪಿ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಪುತ್ತೂರು ಗ್ರಾಮಾಂತರ ಮಂಡಲ ಅಹ್ಯಕ್ಷ ದಯಾನಂದ ಶೆಟ್ಟಿ ಆದೇಶ ಹೊರಡಿಸಿದ್ದಾರೆ.