HomeLatest NewsJOB ALERT : ಅಲ್ಪಸಂಖ್ಯಾತರ ವಸತಿ ಶಾಲೆ/ಕಾಲೇಜುಗಳಲ್ಲಿ ವಿವಿಧ ಶಿಕ್ಷಕರ/ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

JOB ALERT : ಅಲ್ಪಸಂಖ್ಯಾತರ ವಸತಿ ಶಾಲೆ/ಕಾಲೇಜುಗಳಲ್ಲಿ ವಿವಿಧ ಶಿಕ್ಷಕರ/ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ ಕಾಲೇಜುಗಳಿಗೆ ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ವಿವರ; ಕನ್ನಡ ಭಾಷಾ ಶಿಕ್ಷಕರು-7, ಇಂಗ್ಲೀಷ್ ಭಾಷಾ ಶಿಕ್ಷಕರು-9, ಹಿಂದಿ ಭಾಷಾ ಶಿಕ್ಷಕರು-4, ಉರ್ದು ಭಾಷಾ ಶಿಕ್ಷಕರು-2, ಗಣಿತ ಶಿಕ್ಷಕರು-4, ಸಾಮಾನ್ಯ ವಿಜ್ಞಾನ ಶಿಕ್ಷಕರು-4, ಸಮಾಜ ವಿಜ್ಞಾನ ಶಿಕ್ಷಕರು-8, ಗಣಕಯಂತ್ರ ಶಿಕ್ಷಕರು-2, ದೈಹಿಕ ಶಿಕ್ಷಣ ಶಿಕ್ಷಕರು-2 ಒಟ್ಟು-42 ಅತಿಥಿ ಶಿಕ್ಷಕರು.

ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ವಿವರ; ಕನ್ನಡ ಭಾಷಾ ಶಿಕ್ಷಕರು-3, ಇಂಗ್ಲೀಷ್ ಭಾಷಾ ಶಿಕ್ಷಕರು-3, ಉರ್ದು ಭಾಷಾ ಶಿಕ್ಷಕರು-3, ಗಣಿತ ಶಿಕ್ಷಕರು-3, ಭೌತಶಾಸ್ತ್ರ ಉಪನ್ಯಾಸಕರು-3, ರಸಾಯನಶಾಸ್ತ್ರ ಉಪನ್ಯಾಸಕರು-3, ಜೀವಶಾಸ್ತ್ರ ಉಪನ್ಯಾಸಕರು-3, ವ್ಯವಹಾರ ಅಧ್ಯಯನ ಉಪನ್ಯಾಸಕರು-1, ಲೆಕ್ಕಶಾಸ್ತ್ರ ಉಪನ್ಯಾಸಕರು -2, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು-1, ಅರ್ಥಶಾಸ್ತ್ರ ಉಪನ್ಯಾಸಕರು-1, ಇತಿಹಾಸ ಉಪನ್ಯಾಸಕರು-1 ಒಟ್ಟು 27 ಉಪನ್ಯಾಸಕರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್ಸೈಟ್ https://dom.karnataka.gov.in ರಿಂದ ಪಡೆದು, ಮೇ 19 ರೊಳಗಾಗಿ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಶಿವಮೊಗ್ಗ -7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಗಳನ್ನು ಸಂಪರ್ಕಿಸುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular