BIG NEWS: ಸೇನಾ ಸಿಬ್ಬಂದಿ ಕುಟುಂಬಕ್ಕೆ ಆಸ್ತಿ ತೆರಿಗೆ ವಿನಾಯಿತಿ: ಡಿಸಿಎಂ ಪವನ್ ಕಲ್ಯಾಣ್ ಘೋಷಣೆ

ಹೈದರಾಬಾದ್: ಭಾರತೀಯ ಸೇನೆಯಲ್ಲಿರುವ ಸಿಬ್ಬಂದಿ ಕುಟುಂಬಗಳಿಗೆ ಆಸ್ತಿ ತೆರಿಗೆ ವಿನಯಿತಿ ನೀಡಲಾಗುವುದು ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಘೋಷಿಸಿದ್ದಾರೆ.

ರಾಜ್ಯದ ಗ್ರಾಮ ಪಂಚಾಯಿತಿ ಮಿತಿಯೊಳಗಿರುವ ಭಾರತೀಯ ಸೇನೆಯಲ್ಲಿರುವ ಸಿಬ್ಬಂದಿಗೆ ಸೇರಿದ ಕುಟುಂಬಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ತಿಳಿಸಿದರು.

ಸೇನೆಯಲ್ಲಿ ಸೇವೆ ಸಲ್ಲಿಸುವವರಿಗೆ ಗೌರವ ಹಾಗೂ ಕೃತಜ್ಞತೆಯ ಸೂಚಕವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈವರೆಗೆ ಸೇನೆಯಲ್ಲಿ ನಿವೃತ್ತರಾದ ಅಧಿಕಾರಿಗಳ ಅಥವಾ ಗಡಿಯಲ್ಲಿ ಸೇವೆಸಲ್ಲಿಸುವವರ ಕುಟುಂಬಕ್ಕೆ ಮಾತ್ರ ಆಸ್ತಿ ತೆರಿಗೆ ವಿನಾಯಿತಿ ಇತ್ತು. ಅದರೆ ಇನ್ನು ದೇಶಾದ್ಯಂತ ನಿಯೋಜಿತ ಸ್ಥಳಗಳನ್ನು ಲೆಕ್ಕಿಸದೇ ಎಲ್ಲಾ ಸಕ್ರಿಯ ಸಿಬ್ಬಂದಿಯ ಕುಟುಂಬಕ್ಕೆ ಈ ನಿಯಮ ಅನ್ವಯವಾಗಲಿದೆ. ಈ ನಿರ್ಧಾರ ಸೇನೆ, ನೌಕಾಪಡೆ, ವಾಯುಪಡೆ, ಸಿಆರ್ ಪಿಎಫ್ ಮತ್ತು ಅರೆಸೈನಿಕ ಪಡೆಗಳ ಧೈರ್ಯವನ್ನು ಗೌರವಿಸುತ್ತದೆ ರಾಷ್ಟ್ರಕ್ಕೆ ಅಬರ ಸೇವೆ ಅಮೂಲ್ಯವಾದದ್ದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸಿಬ್ಬಂದಿ ಅಥವಾ ಅವರ ಸಂಗಾತಿ ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿಯ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಸೈನಿಕ್ ಕಲ್ಯಾಣ್ ನಿರ್ದೇಶಕರ ಶಿಫಾರಿಸಿನ ಬಳಿಕ ಈ ನಿರ್ಧರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read