ಭಾರತದ ಮೇ 7 ರಂದು ನಡೆದ ಆಪರೇಷನ್ ಸಿಂಧೂರ್ ಮತ್ತು ಪಾಕಿಸ್ತಾನದ ಅಪ್ರಚೋದಿತ ದಾಳಿಗಳ ನಂತರ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ರಾತ್ರಿ “ಹೆಚ್ಚಾಗಿ ಶಾಂತಿಯುತವಾಗಿತ್ತು” ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.
“ಜಮ್ಮು ಮತ್ತು ಕಾಶ್ಮೀರ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ರಾತ್ರಿ ಹೆಚ್ಚಾಗಿ ಶಾಂತಿಯುತವಾಗಿತ್ತು. ಯಾವುದೇ ಘಟನೆಗಳು ವರದಿಯಾಗಿಲ್ಲ, ಇದು ಇತ್ತೀಚಿನ ದಿನಗಳಲ್ಲಿ ಮೊದಲ ಶಾಂತ ರಾತ್ರಿಯಾಗಿದೆ” ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
#WATCH | Punjab: Situation seems normal this morning in Pathankot
— ANI (@ANI) May 12, 2025
As per the Indian Army, "The night remained largely peaceful in Jammu and Kashmir and other areas along the international border. No incident has been reported, marking the first calm night in recent days" pic.twitter.com/NvsMNWFo0W
ಸ್ಥಳೀಯರು ಕೆಲಸಕ್ಕಾಗಿ ತಮ್ಮ ಮನೆಗಳಿಂದ ಹೊರಬಂದಿದ್ದು, ಬೆಳಿಗ್ಗೆಯೂ ಶಾಂತಿಯುತವಾಗಿತ್ತು. ಅಖ್ನೂರ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಕೆಲವು ನಗರಗಳಲ್ಲಿ ವಾಹನಗಳು ಓಡಾಟ ಕಂಡುಬಂದವು . ಸೋಮವಾರ ಬೆಳಿಗ್ಗೆ ಎಲ್ಲವೂ ಸಾಮಾನ್ಯವಾಗಿದೆ ಎಂದು ರಾಜಸ್ಥಾನದ ಜೈಸಲ್ಮೇರ್‌ನ ಸ್ಥಳೀಯರೊಬ್ಬರು ಹೇಳಿದರು.
“ಮಾರುಕಟ್ಟೆ ತೆರೆದಿರುತ್ತದೆ, ಹಗಲಿನ ವೇಳೆ ಯಾವುದೇ ಸಮಸ್ಯೆಗಳಿಲ್ಲ. ಅಂಗಡಿಗಳು ಸಂಜೆ 7:30 ರ ಸುಮಾರಿಗೆ ಮುಚ್ಚಿರುತ್ತವೆ… ನಮ್ಮ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗಿಲ್ಲ” ಎಂದು ಅವರು ಹೇಳಿದರು. ಭಾರತೀಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ನಿನ್ನೆ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನಿಗಳು ಕದನ ವಿರಾಮ ಉಲ್ಲಂಘಿಸಿದರೆ ಭಾರತ ಕಠಿಣ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಬೆನ್ನಲ್ಲೇ ಪಾಕಿಸ್ತಾನ ಗಪ್ ಚುಪ್ ಆಗಿದೆ.