ಭೋಪಾಲ್: ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಮಧ್ಯಪ್ರದೇಶದ ಜಬಲ್ ಪುರ ಸೇನಾ ಪ್ರದೇಶದ ಫೋಟೋ ತೆಗೆದಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಬಲ್ ಪುರದ ದಂಡು ವಲಯದ ಸೇನಾ ಪ್ರದೇಶದ ಚಿತ್ರ ತೆಗೆಯುತ್ತಿದ್ದ ಮೊಹಮ್ಮದ್ ಝುಬೇರ್(32) ಹಾಗೂ ಮೊಹಮ್ಮದ್ ಇರ್ಫಾನ್ (22) ಎಂಬ ಇಬ್ಬರನ್ನು ಸೇನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಇಬ್ಬರೂ ಯಾವುದೇ ದುರುದ್ದೇಶವಿಲ್ಲದೇ ಸಹಜವಾಗಿ ಫೋಟೋತೆಗೆದಿದ್ದೆವು ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.