ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಮುಂದುವರೆದಿದ್ದು, ಅಮೆರಿಕದ ವಿದೇಶಾಂಕ ಸಚಿವ ಮಾರ್ಕೊ ರೂಬಿಯೊ ಭಾರತದ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾರ್ಕೋ ರೂಬಿಯೋ ಮಾತುಕತೆ ನಡೆಸಿದ್ದಾರೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ತಪ್ಪುಗ್ರಹಿಕೆಯನ್ನು ತಪ್ಪಿಸಲು ನೇರ ಸಂವಾದವನ್ನು ಪುನಃ ಸ್ಥಾಪಿಸುವ ಮಾರ್ಗಗಳನ್ನು ಎರಡೂ ದೇಶಗಳು ಕಂಡುಕೊಳ್ಳಬೇಕಾಗಿದೆ ಎಂದು ರೂಬಿಯೊ ತಿಳಿಸಿದ್ದಾರೆ.
ಭವಿಷ್ಯದಲ್ಲಿ ವಿವಾದಗಳನ್ನು ತಪ್ಪಿಸಲು ಹಾಗೂ ಶಾಂತಿಗೆ ಒತ್ತು ನೀಡುವಂತೆ ಅವರು ಅವರು ಕರೆ ನೀಡಿದ್ದಾರೆ ಎಂದು ಅಮೆರಿಕಾ ವಿದೇಶಾಂಗ ಇಲಾಖೆ ವಕ್ತಾರ ಟ್ಯಾಮಿ ಬ್ರೂಸ್ ತಿಳಿಸಿದ್ದಾರೆ.