ಶ್ರೀನಗರ: ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಭಾರಿ ಗುಂಡಿನ ದಾಳಿ ನಡೆಸಲಾಗಿದೆ. ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ.
ಜಮ್ಮು ವಾಯುನೆಲೆ ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ಮಾಡಿದೆ. ಜಮ್ಮುವಿನ ಹಲವು ಪ್ರದೇಶಗಳಲ್ಲಿ ರಾಕೆಟ್, ಶೆಲ್ ದಾಳಿ ನಡೆಸಲಾಗಿದೆ. ಗಡಿಯಲ್ಲಿ ಮತ್ತೆ ಪಾಕಿಸ್ತಾನದಿಂದ ಗುಂಡಿನ ದಾಳಿ ನಡೆದಿದ್ದು, ಮೀಡಿಯಂ ಮಷಿನ್ ಗನ್ ಗಳನ್ನು ಬಳಸಿ ಫೈರಿಂಗ್ ಮಾಡಲಾಗಿದೆ.
ಪಾಕಿಸ್ತಾನವು ಜಮ್ಮುವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ಭಾರತೀಯ ವಾಯು ರಕ್ಷಣಾ ಬಂದೂಕುಗಳು ಪ್ರತಿಯಾಗಿ ಗುಂಡು ಹಾರಿಸುತ್ತಿವೆ.
ಜಮ್ಮು ವಿಭಾಗದ ಕಿಶ್ತ್ವಾರ್ನಲ್ಲಿ ಸಂಪೂರ್ಣ ಬ್ಲ್ಯಾಕೌಟ್ ಜಾರಿಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ ಸೈರನ್ಗಳು ಕೇಳಿಬರುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ಹಲವು ಕಡೆಗಳಲ್ಲಿ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿ ನಡೆಸಿದೆ. ಆಕಾಶದಲ್ಲಿ ಪಾಕಿಸ್ತಾನದ ಡ್ರೋನ್ ಗಳು ಹಾರಾಟ ನಡೆಸುತ್ತಿದ್ದು, ಭಾರತ ಎಸ್ -400 ಡಿಫೆನ್ಸ್ ವ್ಯವಸ್ಥೆ ಮೂಲಕ ಅವುಗಳನ್ನ ಹೊಡೆದುರುಳಿಸಲಾಗಿದೆ.
ಜಮ್ಮುನಗರದಾತ್ಯಂತ ಸಂಪೂರ್ಣ ಬ್ಲಾಕ್ ಔಟ್ ಮಾಡಲಾಗಿದೆ. ಜಮ್ಮು ಕಾಶ್ಮೀರ ಪ್ರವೇಶಿಸುವ ಮೊದಲೇ ಭಾರತೀಯ ಪಡೆಗಳು ಎಸ್ -400 ಡಿಫೆನ್ಸ್ ಸಿಸ್ಟಮ್ ನಿಂದ ಪಾಕಿಸ್ತಾನ ಕ್ಷಿಪಣಿಗಳು, ಡ್ರೋನ್ ಗಳನ್ನು ಹೊಡೆದು ಹಾಕಿದ್ದು, ಪಾಕ್ ದಾಳಿಯನ್ನು ಸೇನಾ ಪಡೆಗಳು ಈ ಸಮರ್ಥವಾಗಿ ಎದುರಿಸಿವೆ. ಪಾಕಿಸ್ತಾನ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
Pakistan has targeted Jammu with loitering munitions; Indian Air Defence guns are firing back pic.twitter.com/jWFanwt8hC
— ANI (@ANI) May 8, 2025
#WATCH | J&K | A complete blackout has been enforced in Kishtwar of Jammu Division, and sirens are being heard throughout the district. pic.twitter.com/1tBwxjoxR7
— ANI (@ANI) May 8, 2025
#WATCH | Sirens being heard in Akhnoor, Jammu and Kashmir
— ANI (@ANI) May 8, 2025
More details awaited. pic.twitter.com/eiGdyj14Tq