ಸರ್ಕಾರದಿಂದ 2024-25ನೇ ಸಾಲಿಗೆ ಹಾಸನ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ವಸತಿರಹಿತ ಮೀನುಗಾರರಿಗೆ ವಿಧಾನಸಭಾ ಕ್ಷೇತ್ರವಾರು ಮನೆಗಳು ಹಂಚಿಕೆಯಾಗಿದ್ದು, ಹಂಚಿಕೆಯಾದ ಮನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿ ವಿಧಾನಸಭಾವಾರು ಸಾಮಾನ್ಯ ವರ್ಗಕ್ಕೆ 19, ಪರಿಶಿಷ್ಟ ಜಾತಿ 4, ಪರಿಶಿಷ್ಟ ಪಂಗಡ 2 ಒಟ್ಟು 25 ಮನೆಗಳಂತೆ, ಒಟ್ಟು ಸಾಮಾನ್ಯ ವರ್ಗಕ್ಕೆ 133, ಪರಿಶಿಷ್ಟ ಜಾತಿಗೆ 28, ಪರಿಶಿಷ್ಟ ಪಂಗಡಕ್ಕೆ 14 ಒಟ್ಟಾರೆಯಾಗಿ 175 ಮನೆಗಳನ್ನು ಹಂಚಿಕೆಮಾಡಲಾಗಿದೆ.
ಹಂಚಿಕೆಯಾದ ಮನೆಗಳಿಗೆ ವಸತಿರಹಿತ ಅರ್ಹ ಮೀನುಗಾರರನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ಅನುಮೋದಿಸಲಾಗುವುದು. ಆದ್ದರಿಂದ, ವಸತಿರಹಿತ ಅರ್ಹ ಮೀನುಗಾರರು ಅರ್ಜಿಯನ್ನು ಸಂಬಂಧಪಟ್ಟ ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕು ಮಟ್ಟದ ಕಚೆÃರಿಗಳಿಗೆ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಮೇ.31 ಕೊನೆಯ ದಿನ ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಸಕಲೇಶಪುರ 9986398624, ಮೀನುಗಾರಿಕೆ ಸಹಾಯಕ ನಿರ್ದೇಶಕರು ಗೊರೂರು 9964395651, ಮೀನುಗಾರಿಕೆ ಸಹಾಯಕ ನಿರ್ದೇಶಕರು ಹೊಳೆನರಸೀಪುರ(ಪ್ರಭಾರ) 9964395651, ಮೀನುಗಾರಿಕೆ ಸಹಾಯಕ ನಿರ್ದೇಶಕರು ಹಾಸನ 8296125312, ಮೀನುಗಾರಿಕೆ ಸಹಾಯಕ ನಿರ್ದೇಶಕರು ಚನ್ನರಾಯಪಟ್ಟಣ(ಪ್ರಭಾರ) 7411278429, ಮೀನುಗಾರಿಕೆ ಸಹಾಯಕ ನಿರ್ದೇಶಕರು ಬೇಲೂರು 7411278429, ಮೀನುಗಾರಿಕೆ ಸಹಾಯಕ ನಿರ್ದೇಶಕರು ಅರಸೀಕೆರೆ 8549933411, ಮೀನುಗಾರಿಕೆ ಸಹಾಯಕ ನಿರ್ದೇಶಕರು ಅರಕಲಗೂಡು 8147806919, ಮೀನುಗಾರಿಕೆ ಸಹಾಯಕ ನಿರ್ದೇಶಕರು ಆಲೂರು(ಪ್ರಭಾರ) 9008419748 ತಮಗೆ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಪಂಚಾಯತ್ ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.