ಲಾಹೋರ್: ಭಾರತಿಯ ವಾಯುಪಡೆಗಳ ದಾಳಿಯಿಂದ ತತ್ತರಿಸಿದ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಿದೆ.
ಇಸ್ಲಾಮಾಬಾದ್ ಮತ್ತು ರಾಬಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನಾ ಕೇಂದ್ರ ಕಚೇರಿಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ ನಡೆಸುವ ಭೀತಿಯಿಂದ ತನ್ನ ವಾಯು ಪ್ರದೇಶವನ್ನು ಪಾಕಿಸ್ತಾನ ಬಂದ್ ಮಾಡಿದೆ.
ತನ್ನ ನಾಗರಿಕ ವಿಮಾನಗಳ ಹಾರಾಟಕ್ಕೂ ಕೂಡ ಪಾಕಿಸ್ತಾನ ನಿರ್ಬಂಧ ಹೇರಿರುವುದು ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಯಾವ ರೀತಿ ಭಯದಿಂದ ಕಂಗಾಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಮುಂದಿನ 48 ಗಂಟೆಗಳವರೆಗೆ ಪಾಕಿಸ್ತಾನವು ನೋ ಫ್ಲೈ ಜೋನ್ ಆಗಿರಲಿದೆ. ಇದು ಮುಂಜಾಗ್ರತೆಯ ನಡೆ ಎಂದು ಪಾಕಿಸ್ತಾನ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಮಿಲಿಟರಿ ಕೇಂದ್ರ ಕಚೇರಿ ರಕ್ಷಣೆಗೆ ತಂತ್ರ ಅನುಸರಿಸಿದ್ದು, ತನ್ನದೇ ನಾಗರಿಕ ವಿಮಾನಗಳಿಗೂ ಪ್ರವೇಶ ನಿರ್ಬಂಧಿಸಿದೆ.