ಮಂಗಳೂರು: ಮೀನು ವ್ಯಾಪಾರಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಕೋಡಿಕೆರೆ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದ ಮರುದಿನ ಬೆಳಗಿನ ಜಾವ ಕೋಡಿಕೆರೆ ಲೋಕೇಶ್ ಗ್ಯಾಂಗ್ ಪ್ರತೀಕಾರದ ಹತ್ಯೆ ಯತ್ನ ನಡೆಸಿದ್ದರು. ಕುಂಟಿಕಾನ ಸಮೀಪ ಉಳ್ಳಾಲದ ಮೀನು ವ್ಯಾಪಾರಿ ಲುಕ್ಮಾನ್ ಎಂಬುವರನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿತ್ತು. ಈ ವೇಳೆ ಮಹಿಳೆಯೊಬ್ಬರು ಕಿರುಚಾಡಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದರು. ಇದರಿಂದ ಲುಕ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿಕೆರೆ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.