ಬೆಂಗಳೂರು : ಬಾಬಾ ಸಾಹೇಬರ ಸೋಲಿಗೆ ಕಾರಣ ತಿಳಿಯಲು ಬಿಜೆಪಿ ನಾಯಕರು ದೆಹಲಿಗೆ ಹೋಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಚುನಾವಣಾ ಸೋಲಿಗೆ ಸಾವರ್ಕರ್ ಕಾರಣ ಎಂದು ಹೇಳಿದ ಪತ್ರ ಈಗಾಗಲೇ ಜಗಜ್ಜಾಹೀರಾಗಿದೆ. ಬಿಜೆಪಿ ನಾಯಕರು ಸಾಧ್ಯವಾದರೆ ದೆಹಲಿ ಪ್ರವಾಸ ಕೈಗೊಂಡು, ಡಾ. ಅಂಬೇಡ್ಕರ್ ಅವರ ಪತ್ರಗಳ ಸಂಗ್ರಹವಿರುವ ನ್ಯಾಷನಲ್ ಆರ್ಖೈವ್ಸ್ ಆಫ್ ಇಂಡಿಯಾ ಸಂಸ್ಥೆಗೆ ಭೇಟಿ ನೀಡಲಿ. ಅವರ ಪ್ರವಾಸದ ಖರ್ಚು ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ.
ಬಿಜೆಪಿ ನಾಯಕರಿಗೆ ಅಲ್ಲಿ ಇರುವ 313 ಪೇಪರ್ಗಳನ್ನು ಓದಲು ಬರುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ನಿಮಗೆ ಇತಿಹಾಸ ತಿಳಿಯುವ ಆಸಕ್ತಿ ಇಲ್ಲ, ಯೋಗ್ಯತೆಯೂ ಇಲ್ಲ. ಬಾಬಾ ಸಾಹೇಬರ ಸ್ವಂತ ಕೈಬರಹದಲ್ಲಿ ಇರುವ ಪತ್ರದಲ್ಲಿ ಡಾಂಗೆ ಮತ್ತು ಸಾವರ್ಕರ್ ಸೇರಿ ತಮ್ಮ ಸೋಲಿಗೆ ಸಂಚು ನಡೆಸಿದ್ದರ ಬಗ್ಗೆ ನೇರವಾಗಿ ವಿವರಿಸಿದ್ದಾರೆ. ಸಾಕ್ಷಿ ಕೇಳುತ್ತಿದ್ದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಾಕ್ಷಿ ನೀಡಿದ್ದೇನೆ. ಅವರು ತಮ್ಮ ಮಾತಿಗೆ ಬದ್ಧರಾಗಿ ನಡೆದುಕೊಳ್ಳುತ್ತಾರೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
*ಬಿಜೆಪಿಗೆ ವರ್ತಮಾನದ ಸಭ್ಯತೆಯೂ ಇಲ್ಲ, ಇತಿಹಾಸದ ಜ್ಞಾನವೂ ಇಲ್ಲ*
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 4, 2025
*ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು ಎನ್ನುವ ಕುರಿತಂತೆ ಮುಂದಿಟ್ಟ ಪುರಾವೆಗೆ ಬಿಜೆಪಿಯ ಪ್ರತಿಕ್ರಿಯೆ – ಅಸಭ್ಯತೆ, ಅಜ್ಞಾನ ಅಷ್ಟೇ*
https://t.co/pGpWjyAid2