ತುಮಕೂರು : ತುಮಕೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆ ಮುಂದೆ ಆಟವಾಡುವಾಗ ವಿದ್ಯುತ್ ತಂತಿ ತಗುಲಿ 5 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ತುಮಕೂರಿನ ತುರವೇಕೆರೆ ತಾಲೂಕಿನ ಗೋರಘಟ್ಟದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಚಂದ್ರಯ್ಯ ಎಂಬುವವರ ಮಗ ಪೋಷಕ ಶೆಟ್ಟಿ (5) ಎಂದು ಗುರುತಿಸಲಾಗಿದೆ.
ಮನೆ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮನೆ ಎದುರುಗಡೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇದನ್ನು ಗಮನಿಸದೇ ಬಾಲಕ ವಿದ್ಯುತ್ ತಂತಿ ತುಳಿದಿದ್ದಾನೆ ಎನ್ನಲಾಗಿದೆ. ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.