ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ ಗೌರವಧನ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೇ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 18-45 ವರ್ಷಗಳ ವಯೋಮಿತಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಫಿಸಿಯೋಥೆರಪಿಸ್ಟ್/ಆಕ್ಯುಪೇಷನಲ್ ಥೆರಪಿಸ್ಟ್-1 ಹುದ್ದೆ ಖಾಲಿ ಇದ್ದು, ಡಿಗ್ರಿ ಇನ್ ಪಿಸಿಯೋಥೆರಪಿ/ಆಕ್ಯುಪೇಷನಲ್ ಥೆರಪಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.25000/- ನೀಡಲಾಗುವುದು. ಪ್ರಾಥೋಟಿಸ್ಟ್ ಮತ್ತು ಆರ್ಥೋಟಿಸ್ಟ್ (ಪಿ&ಒ)-1 ಹುದ್ದೆ ಖಾಲಿ ಇದ್ದು, ಡಿಪ್ಲೊಮಾ ಇನ್ ಪಿ&ಓ/ಐಟಿಐ (ಫಿಟ್ಟರ್) ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.12000/-ವೇತನ ನೀಡಲಾಗುವುದು. ಸ್ಪೀಚ್ ಥೆರಪಿಸ್ಟ್ & ಆಡಿಯಾಲಿಜಿಸ್ಟ್-1 ಹುದ್ದೆ ಖಾಲಿ ಇದ್ದು, ಬಿ.ಎಸ್ಸಿ ಇನ್ ಸ್ಪೀಚ್ ಮತ್ತು ಆಡಿಯಾಲಜಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.25000/-ವೇತನ ನೀಡಲಾಗುವುದು. ಮೊಬಿಲಿಟಿ ಇನ್ಸ್ಟ್ರಕ್ಟರ್-1 ಹುದ್ದೆ ಖಾಲಿ ಇದ್ದು, ಸರ್ಟಿಫಿಕೇಟ್ ಕೋರ್ಸ್ ಇನ್ ಓರಿಯಂಟೇಷನ್ & ಮೊಬಿಲಿಟಿ (ಓ&ಎಂ) ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.8000/- ವೇತನ ನೀಡಲಾಗುವುದು. ಇಯರ್ ಮೋಲ್ಡ್ ಟೆಕ್ನಿಷಿಯನ್-1 ಹುದ್ದೆ ಖಾಲಿ ಇದ್ದು, ಸರ್ಟಿಫಿಕೇಟ್ ಇನ್ ಇಯರ್ ಮೋಲ್ಡ್ ಟೆಕ್ನಾಲಜಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.8000/- ವೇತನ ನೀಡಲಾಗುವುದು.
ಹುದ್ದೆ ಮತ್ತು ವಿದ್ಯಾರ್ಹತೆಗನುಗುಣವಾಗಿ ಸ್ವ-ವಿವರದೊಂದಿಗೆ ಅರ್ಜಿಯನ್ನು ಸಿದ್ದಪಡಿಸಿ, ಮೊಬೈಲ್ ಸಂಖ್ಯೆ ನಮೂದಿಸಿ, ಅಗತ್ಯ ದಾಖಲೆಗಳೊಂದಿಗೆ ಕಾರ್ಯದರ್ಶಿಗಳು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ , ಲೋಕಾಯುಕ್ತ ಕಚೇರಿ ಆವರಣ ಬಿ.ಡಿ.ರಸ್ತೆ ಚಿತ್ರದುರ್ಗ-577501, ದೂರವಾಣಿ ಸಂಖ್ಯೆ 08194-220085, ಮೊಬೈಲ್ 9448038400 ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಕಚೇರಿಯಿಂದ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read