ಹಾಸನ: ಹೆಡ್ ಕಾನ್ಸ್ ಟೇಬಲ್ ನಿಂದಲೇ ಮೀಟರ್ ಬಡ್ಡಿ ದಂದೆ ನಡೆಯುತ್ತಿತ್ತಿದ್ದು, ಕಿರುಕುಳ ನೀಡಿರುವ ಆರೋಪ ಕೇಳಿಬದಿದೆ. ಹೆಡ್ ಕಾನ್ಸ್ ಟೇಬಲ್ ಅರುಣ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಎಸ್ ಪಿ ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರುಣ್ ಮೀಟರ್ ಬಂಡಿ ದಂಧೆ ನಡೆಸುತ್ತಿದ್ದು, ವ್ಯಕ್ತಿಯೊಬ್ಬರಿಗೆ 80 ಸಾವಿರ ರೂಪಾಯಿಗೆ 2 ಲಕ್ಷ ರೂಪಾಯಿ ಬಡ್ಡಿ ಕಟ್ಟಿದರೂ ಬಿಡದೇ ಕಿರುಕುಳ ನೀಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕೋಳಿ ಅಂಗಡಿ ಮಾಡಲು ತನ್ವೀರ್ ಎಂಬುವವರು 80 ಸಾವಿರ ರೂಪಾಯಿ ಸಾಲ ಪಡೆದಿದರಂತೆ. ಅದಕ್ಕೆ ವಾರಕ್ಕೆ 7000 ರೂಪಾಯಿ ಬಡ್ಡಿ ವಸೂಲಿ ಮಾಡಿದ್ದಾರಂತೆ. ತಿಂಗಳಿಗೆ 28 ಸಾವಿರ ರೂಪಾಯಿ ಬಡ್ಡಿ ಕಟ್ಟಿ ಹೈರಾಣಾಗಿದ್ದರು.
ಅರುಣ್ ಗೆ ಬಡ್ಡಿ ಕಟ್ಟಲೆಂದೇ ವಕೀಲ ದುಶ್ಯಂತ್ ಸೇರಿ ಹಲವರಿಂದ ಸಾಲ ಪಡೆದಿದ್ದರಂತೆ. ಎರಡು ವಾರದಿಂದ ಬಡ್ಡಿ ಕಡ್ಡಿ ಕಟ್ಟದ ಕಾರಣಕ್ಕೆ ಹೆಡ್ ಕಾನ್ಸ್ ಟೇಬಲ್ ಅರುಣ್ ಕಿರುಕುಳ ನೀಡಿದ್ದರಂತೆ ಇದರಿಂದ ಬೇಸತ್ತು ತನ್ವೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ತನ್ವೀರ್ ಅವರನ್ನು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ
ಮೀಟರ್ ಬಡ್ಡಿ ಆರೋಪ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.