ಶಿವಮೊಗ್ಗದಲ್ಲಿ ಹೆಚ್ಚಿದ ರೌಡಿಸಂ: ದೇವಸ್ಥಾನದಲ್ಲಿ ಮಚ್ಚು ಪೂಜೆ, ಫೈರಿಂಗ್

ಶಿವಮೊಗ್ಗ: ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ರೌಡಿಸಂ ಹೆಚ್ಚಾಗುತ್ತಿದೆ. ರೌಡಿಗಳಿಗೆ ಪೊಲೀಸರ ಭಾವೇ ಇಲ್ಲದಂತಾಗಿದೆ. ಹಾಡಹಗಲೇ ನಡುರಸ್ತೆಯಲ್ಲಿ ರೌಡಿಸಂ ಮಾಡುವುದು, ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡುವುದು, ಗಾಳಿಯಲ್ಲಿ ಗುಂಡು ಹಾರಿಸುವುದು ಮಾಡುತ್ತಿದ್ದಾರೆ.

ಇದರಿಂದಾಗಿ ಜನರು ಆತಂಕದ ವಾತಾವರಣದಲ್ಲಿ ಕಾಲಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗದ ಟಿಪ್ಪುನಗರ ಬಡಾವಣೆಯಲ್ಲಿ ಮಹಮದ್ ಇರ್ಫಾನ್ ಎಂಬಾತ ರಾತ್ರಿ ಗನ್ ನಿಂದ ದಾಳಿ ನಡೆಸಿದ್ದಾನೆ. ಗಾಳಿಯಲ್ಲಿ ಗುಡು ಹಾರಿಸಿ ಆತಂಕ ಸೃಷ್ಟಿಸಿದ್ದಾನೆ.

ಫೈರಿಂಗ್ ಬೆನ್ನಲ್ಲೇ ಎಚ್ಚೆತ್ತ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ರೌಡಿ ಶೀಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಹಳೇ ಪ್ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಗಳು ಹಾಡಹಗಲೇ ಗಲಾಟೆ ಮಾಡಿಕೊಂಡಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ. ರೌಡಿ ಶೀಟರ್ ವಿಶ್ವ ನಗರದ ದೇವಸ್ಥಾನದಲ್ಲಿ ಮಚ್ಚು ಪೂಜೆ ಮಾಡಿದ್ದಾನೆ. ಅರ್ಚಕರಿಂದ ಮಚ್ಚಿಗೆ ಪೂಜೆ ಮಾಡಿಸಿದ್ದಾನೆ. ಈ ಮೂಲಕ ರೌಡಿ ಗಾಂಧಿ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದ್ದಾನೆ ಎನ್ನಲಾಗಿದೆ ಈ ಎರಡು ಘಟನೆಗಳು ಶಿವಮೊಗ್ಗ ಹಾಗೂ ಭದ್ರಾಅವತಿ ನಗರದ ಜನರನ್ನು ಆತಂಕಕ್ಕೀಡುಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read