HomeLatest NewsBIG NEWS : ISC- 12ನೇ ತರಗತಿ ಪರೀಕ್ಷೆಯಲ್ಲಿ 98.25% ಅಂಕ ಗಳಿಸಿ ಫಸ್ಟ್ Rank...

BIG NEWS : ISC- 12ನೇ ತರಗತಿ ಪರೀಕ್ಷೆಯಲ್ಲಿ 98.25% ಅಂಕ ಗಳಿಸಿ ಫಸ್ಟ್ Rank ಪಡೆದ ಸಚಿವ ಮಧು ಬಂಗಾರಪ್ಪ ಪುತ್ರ

ಬೆಂಗಳೂರು : ಐಎಸ್’ ಸಿ 12ನೇ ತರಗತಿಯ ಪರೀಕ್ಷೆಯಲ್ಲಿ ಸಚಿವ ಮಧು ಬಂಗಾರಪ್ಪ ಅವರ ಪುತ್ರ 98.25% ಅಂಕ ಗಳಿಸಿದ್ದಾರೆ.

ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ” ನನ್ನ ಮಗ, ಸೂರ್ಯ ಮಧು ಬಂಗಾರಪ್ಪ ಐಸಿಎಸ್ಸಿ 12ನೇ ತರಗತಿಯ ಪರೀಕ್ಷೆಯಲ್ಲಿ 98.25% ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ಮೊದಲನೇ ರ್ಯಾಂಕ್ ಪಡೆದಿದ್ದಾನೆ ಎಂದು ತಿಳಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಇದು ಅವನ ಶ್ರಮ, ಸಮರ್ಪಣೆ ಮತ್ತು ದೃಢ ಸಂಕಲ್ಪಕ್ಕೆ ಸಿಕ್ಕಿರುವ ಫಲ. ಅವನ ಈ ಸಾಧನೆಗೆ ನಾನು ಹೆಮ್ಮೆಪಡುತ್ತೇನೆ ಮತ್ತು ಅವನ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಹಾಗೂ ಮಾರ್ಗದರ್ಶನ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು! ” ಎಂದು ಸಚಿವ ಮಧು ಬಂಗಾರಪ್ಪ ಪೋಸ್ಟ್ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular