ಬೀದರ್ : ಬೀದರ್ ನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮಗು ಎದುರೇ ಕತ್ತು ಸೀಳಿ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಜಾಫರವಾಡಿ ಗ್ರಾಮದ ರಾಜು (28) ಹಾಗೂ ಆತನ ಪತ್ನಿ ಶಾರಿಕಾ ಕೊಳಸುರೆ (24) ಎಂದು ಗುರುತಿಸಲಾಗಿದೆ. 2 ವರ್ಷದ ಮಗುವಿನ ಎದುರೇ ದಂಪತಿಯನ್ನು ಆರೋಪಿಗಳು ಬರ್ಬರವಾಗಿ ಕೊಂದಿದ್ದಾರೆ.
ಅನೈತಿಕ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಗ್ರಾಮದ ಮಹಿಳೆ ಜೊತೆ ರಾಜು ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ, ಈ ಕಾರಣಕ್ಕೆ ಯುವತಿ ಕಡೆಯವರು ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಂಧಿತರನ್ನು ದತ್ತಾತ್ರೇಯ ಹಾಗೂ ತುಕಾರಾಮ್ ಎಂದು ಗುರುತಿಸಲಾಗಿದೆ. ದತ್ತಾತ್ರೇಯ ತಂಗಿ ಜೊತೆ ರಾಜು ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು ಎನ್ನಲಾಗಿದೆ. ಮಂಠಾಳ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
You Might Also Like
TAGGED:ಬರ್ಬರ ಹತ್ಯೆ