BIG NEWS : ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಿದ DCM ಡಿಕೆ ಶಿವಕುಮಾರ್

ಬೆಂಗಳೂರು : ನಾಡಿನ ಸಮಸ್ತ ಜನತೆಗೆ ಡಿಸಿಎಂ ಡಿಕೆ ಶಿವಕುಮಾರ್ ಬಸವ ಜಯಂತಿಯ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು, ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶʼʼ ಎಂದು ಜಗಜ್ಯೋತಿ ಬಸವಣ್ಣನವರ ಕುರಿತು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಹೇಳಿದ್ದಾರೆ. ಇದು ಬಸವಣ್ಣನೆಂಬ ಮಹಾನ್ ದಾರ್ಶನಿಕರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ವಚನವಾಗಿದೆ. ಬಸವಣ್ಣನವರಂಥ ಮತ್ತೊಬ್ಬ ಸಾಮಾಜಿಕ ತಜ್ಞರಿಲ್ಲ.

ನಮ್ಮ ಸರ್ಕಾರ ಸದಾ ಬಸವಣ್ಣನವರ ಸಾಮಾಜಿಕ ನ್ಯಾಯ, ಸರ್ವೋದಯ, ಸಮಾನತೆ, ದಾಸೋಹ, ಕಾಯಕ ತತ್ವಗಳ ತಳಹದಿಯ ಮೇಲೆಯೇ ನಡೆಯುತ್ತಿದೆ ಹಾಗೂ ಅವರನ್ನು ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದೇವೆ. ಅವರ ಆದರ್ಶಗಳನ್ನು ಪಾಲಿಸೋಣ, ಸಮಸಮಾಜವನ್ನು ನಿರ್ಮಿಸೋಣ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read