ನಿವೇಶನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನ

ಬಳ್ಳಾರಿ : ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮಗಳಲ್ಲಿ ಭೂ ಮಾಲೀಕರು ಹಾಗೂ ಪ್ರಾಧಿಕಾರದ ವತಿಯಿಂದ ಜಂಟಿ ಸಹಯೋಗದೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸುಂದರವಾದ ವಸತಿ ಯೋಜನೆಯನ್ನು ನಿರ್ಮಿಸುತ್ತಿದ್ದು, ನಿವೇಶನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮಗಳಲ್ಲಿ ಪ್ರಾಧಿಕಾರದ ವತಿಯಿಂದ ರೈತರ ಸಹಭಾಗಿತ್ವದ ಶೇ.50:50 ಅನುಪಾತದಡಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ವಸತಿ ಯೋಜನೆಯನ್ನು ರಚಿಸಿ ಸರ್ಕಾರದ ಅನುಮೋದನೆ ಪಡೆದುಕೊಂಡು ಸುಂದರವಾದ ವಸತಿ ಯೋಜನೆ ಅಭಿವೃದ್ಧಿಪಡಿಸಲಾಗುತ್ತದೆ.

ಬಡಾವಣೆ ರಚನೆ ಮಾಡಲು ಆಸಕ್ತಿ ಇರುವ ಭೂ ಮಾಲೀಕರು ಭೂ ಪರಿಹಾರಕ್ಕೆ ಬದಲಾಗಿ, ಪ್ರಾಧಿಕಾರದಿಂದ ರಚನೆ ಮಾಡಿದ ಯೋಜನೆಯಲ್ಲಿನ ನಿವೇಶನಗಳನ್ನು ಶೇ.50:50 ರ ಅನುಪಾತದಲ್ಲಿ (ಮೂಲೆ ನಿವೇಶನಗಳನ್ನು ಹೊರತುಪಡಿಸಿ) ರೈತರ ಭಾಗದ ಭಾಗಶಃ ಶೇ.50 ರಷ್ಟು ನಿವೇಶನಗಳನ್ನು (ಮೂಲೆ ನಿವೇಶನಗಳನ್ನು ಹೊರತುಪಡಿಸಿ) ಹಸ್ತಾಂತರಿಸಿ ಉಳಿದ ಪ್ರಾಧಿಕಾರದ ಭಾಗಶಃ ಶೇ.50 ರಷ್ಟು ನಿವೇಶನಗಳನ್ನು ಸಾರ್ವಜನಿಕರಿಗೆ ಯೋಗ್ಯ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.

ಆಸಕ್ತಿವುಳ್ಳ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮಗಳ ಪ್ರದೇಶ ವ್ಯಾಪ್ತಿಯ ಭೂ ಮಾಲೀಕರು / ರೈತರು ಯಾವುದೇ ಋಣಭಾರವಿಲ್ಲದೆ ಬಿಟ್ಟು ಕೊಡಲು ಹಾಗೂ ರಚನೆ ಮಾಡಲ್ಪಡುವ ವಸತಿ ವಿನ್ಯಾಸದಲ್ಲಿ ವಸತಿಗಾಗಿ ಕಾಯ್ದಿರಿಸಿದ ಪ್ರದೇಶದಲ್ಲಿ ಶೇ.50:50 ರಷ್ಟು ನಿವೇಶನಗಳನ್ನು ಪಡೆಯಲು ಇಚ್ಛೆಯುಳ್ಳವರು ತಮ್ಮ ಜಮೀನಿನ ಇತ್ತೀಚಿನ ಪಹಣಿ, ಸರ್ವೆ ನಕಾಶೆ, ಋಣ ಭಾರ ಪ್ರಮಾಣ ಪತ್ರ ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ಕಚೇರಿ ದೂ.08395-295618 ಗೆ ಸಂಪರ್ಕಿಸಬಹುದು ಎಂದು ತೋರಣಗಲ್ಲಿನ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಹೆಚ್.ರಾಘವೇಂದ್ರ ಗುರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read