ಬೆಂಗಳೂರು: ತೆಂಗಿನಕಾಯಿ ದರ ಮತ್ತೆ ಏರಿಕೆಯಾಗಿದ್ದು, ಕೆಜಿಗೆ 100 ರೂಪಾಯಿ ಗಡಿಯತ್ತ ಸಾಗಿದೆ. ಇತಿಹಾಸದಲ್ಲಿ ಕಂಡು ಕೇಳದಷ್ಟು ದುಬಾರಿಯಾಗಿರುವ ತೆಂಗಿನ ಕಾಯಿ ಬೆಲೆ ಏರುಗತಿಯಲ್ಲಿ ಸಾಗಿದ್ದು, ಕೆಜಿಗೆ 80 ರೂ.ಗೆ ಏರಿಕೆಯಾಗಿದೆ. ಒಂದು ತೆಂಗಿನ ಕಾಯಿ ದರ 60, 70, 80ರೂ.ವರೆಗೆ ಏರಿಕೆಯಾಗಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.
ಬಿಸಿಲು, ರೋಗ, ಇಳುವರಿ ಕುಸಿತ ಮೊದಲಾದ ಕಾರಣಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ದರ ಗರಿಷ್ಠ 80 ರೂಪಾಯಿವರೆಗೆ ಏರಿಕೆಯಾಗಿದ್ದು, ಕೊಬ್ಬರಿ, ಕೊಬ್ಬರಿ ಎಣ್ಣೆ ದರ ಕೂಡ ಏರಿಕೆಯಾಗತೊಡಗಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 35 ರೂಪಾಯಿ ಇದ್ದ ತೆಂಗಿನಕಾಯಿ ದರ ಎರಡು ಪಟ್ಟು ಹೆಚ್ಚಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕ್ವಿಂಟಲ್ ಗೆ 13,000 ರೂ. ಇದ್ದ ಕೊಬ್ಬರಿ ದರ ಮಾರ್ಚ್ 25ರಂದು ಗರಿಷ್ಠ 19,051 ರೂಪಾಯಿಗೆ ಮಾರಾಟವಾಗಿದೆ. ಸದ್ಯ 18 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ಎಳನೀರು ದರ ಒಂದಕ್ಕೆ 60, 70 ರೂಪಾಯಿ, ತೆಂಗಿನ ಕಾಯಿ ಒಂದು ಕೆಜಿಗೆ 80 ರೂ.ವರೆಗೆ ಇದ್ದು, ತೆಂಗಿನ ಎಣ್ಣೆ ಲೀಟರಿಗೆ 300 ರಿಂದ 320ರೂ.ದರ ಇದೆ.