ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್ 27) ನಡೆದ ಐಪಿಎಲ್ 2025 ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿತು. 163 ರನ್ಗಳ ಗುರಿ ಬೆನ್ನಟ್ಟಿದ ರಜತ್ ಪಾಟಿದಾರ್ ನೇತೃತ್ವದ ತಂಡದ ಪರ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿದರು ಮತ್ತು ಕೃನಾಲ್ ಪಾಂಡ್ಯ (47 ಎಸೆತಗಳಲ್ಲಿ 73 ರನ್) ಅವರೊಂದಿಗೆ ನಾಲ್ಕನೇ ವಿಕೆಟ್ಗೆ 119 ರನ್ ಸೇರಿಸಿದರು.
ಕ್ರೀಸ್ನಲ್ಲಿದ್ದಾಗ ಕೊಹ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಐಪಿಎಲ್ 2025 ರಲ್ಲಿ ಆರ್ಸಿಬಿಯ ಏಳನೇ ಗೆಲುವಿನಲ್ಲಿ 51 ರನ್ ಗಳಿಸಿದ ನಂತರ, ಕೊಹ್ಲಿ ಕೆಎಲ್ ರಾಹುಲ್ ಅವರನ್ನು ‘ಇದು ನನ್ನ ಮೈದಾನ’ ಎಂದು ಗೇಲಿ ಮಾಡಿದರು.ಪಂದ್ಯ ಮುಕ್ತಾಯದ ಬಳಿಕ ಕೊಹ್ಲಿ ಮೈದಾನಕ್ಕೆ ಬಂದು ಮೈದಾನದಲ್ಲಿದ್ದ ಕೆಎಲ್ ರಾಹುಲ್ ಬಳಿ ಹೋಗಿ ಖಾಲಿ ಕೈಯಿಂದಲೇ ಅವರ ಮುಂದೆಯೇ ವೃತ್ತ ಸುತ್ತಿ ಕೆಎಲ್ ರಾಹುಲ್ ರನ್ನು ಇದು ನನ್ನ ಮೈದಾನ ಎಂದು ಛೇಡಿಸಿದ್ದಾರೆ.ಈ ವೇಳೆ ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ ಸಹ ಆಟಗಾರರು ನಕ್ಕಿದ್ದಾರೆ.
ಬಳಿಕ ಕೊಹ್ಲಿ ರಾಹುಲ್ ರನ್ನು ಅಪ್ಪಿ ನಗೆ ಬೀರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.ದೆಹಲಿಯಲ್ಲಿ ಭಾನುವಾರ 51 ರನ್ ಗಳಿಸಿದ ಕೊಹ್ಲಿ ಐಪಿಎಲ್ 2025 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪಡೆಯಲು ಸಹಾಯ ಮಾಡಿದರು. ಈ ವರ್ಷ ಆರ್ಸಿಬಿ ಪರ ಆಡಿರುವ 10 ಪಂದ್ಯಗಳಲ್ಲಿ ಕೊಹ್ಲಿ 6 ಅರ್ಧಶತಕಗಳ ಸಹಾಯದಿಂದ 443 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ಲೀಡರ್ಬೋರ್ಡ್ನಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರ 10 ಪಂದ್ಯಗಳನ್ನಾಡಿರುವ ಸೂರ್ಯ ಒಟ್ಟು 427 ರನ್ ಗಳಿಸಿದ್ದಾರೆ.
kohli😂❤️🫶🏻 https://t.co/7Nx1wejHw8 pic.twitter.com/otniekWn7Y
— S A K T H I ! (@Classic82atMCG_) April 27, 2025