ರಸ್ತೆ ಮೇಲೆ ಪಾಕಿಸ್ತಾನ ಧ್ವಜ ಅಂಟಿಸಿ ಪ್ರತಿಭಟನೆ: 6 ಜನ ಪೊಲೀಸ್ ವಶಕ್ಕೆ

ಕಲಬುರಗಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕನ್ನಡಿಗರು ಸೇರಿ 28 ಜನರು ಸಾವನ್ನಪ್ಪಿದ್ದು, ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿದೆ, ಈ ಹೊತ್ತಲ್ಲೇ ಕಲವುರಗಿಯಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕ್ಕರ್ ರಸ್ತೆ ಮೇಲೆ ಅಂಟಿಸಿರುವುದು ಪತ್ತೆಯಾಗಿದ್ದು, ಇದು ಸಾರ್ವಜನಿಕರ ಹಗೌ ಪೊಲೀಸರ ನಿದ್ದೆಗೆಡಿಸಿತ್ತು.

ಕಲಬುರಗಿಯ ಜಗತ್ ವೃತ್ತ ಹಾಗೂ ನ್ಯಾಷನಲ್ ಚೌಕ ರಸ್ತೆಗಳ ಮೇಲೆ ಪಾಕಿಸ್ತಾನದ ಧ್ವಜದ ಸ್ಟಿಕ್ಕರ್ ಗಳನ್ನು ಸಾಲಾಗಿ ಅಂಟಿಸಲಾಗಿತ್ತು. ತಕ್ಷಣ ಪೊಲೀಸರು ಅಲರ್ಟ್ ಆಗಿದ್ದು, ಪಾಕಿಸ್ತಾನ ಧ್ವಜ ಸ್ಟಿಕ್ಕರ್ ಅಂಟಿಸಿದ್ದು ಯಾಅರು ಎಂದು ಪತ್ತೆ ಮಾಡಲು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ಭಜರಂಗದಳ ಕಾರ್ಯಕರ್ತರು, ಪಹಲ್ಗಾಮ್ ದಾಳಿಯಿಲ್ಲ ಪಾಕಿಸ್ತಾನ ಉಗ್ರರು ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆಗಿದಿದ್ದಕ್ಕೆ ಪಾಕಿಸ್ತಾನದ ಮೇಲಿನ ಧ್ವೇಷಕ್ಕೆ ನಾವೇ ಸ್ಟಿಕ್ಕರ್ ಅಂಟಿಸಿ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದ್ದಾರೆ. ಆಗ ಪೊಲೀಸರು ಕೊಂಚ ನಿರಾಳರಾಗಿದ್ದಾರೆ. ಪಾಕಿಸ್ತಾನ ಧ್ವಜದ ಸ್ಟಿಕ್ಕರ್ ಅಂಟಿಸಿ ಜನರಲ್ಲಿ ಗೊಂದಲ ಮೂಡಿಸಿದ್ದಕ್ಕಾಗಿ ೬ ಜನರನ್ನುನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read