BIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ನಾಳೆ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ.!

ಬೆಂಗಳೂರು : 27.04.2025 ರಂದು ಬೆಳಗ್ಗೆ 05:00 ಗಂಟೆಯಿಂದ 10:00 ಗಂಟೆಯವರೆಗೆ ಟಿ.ಸಿ.ಎಸ್. ವರ್ಲ್ಡ್ 10ಕೆ ಮ್ಯಾರಥಾನನ್ನು ಆಯೋಜಿಸಲಾಗಿದ್ದು, ಸದರಿ ಮ್ಯಾರಥಾನ್ಗೆ ಸುಮಾರು 30000 ಜನರು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ ಸಲುವಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು

  1. ವಾರ್ ಮೆಮೋರಿಯಲ್ ಜಂಕ್ಷನ್.
  2. ಅಣ್ಣಸ್ವಾಮಿ ಮುದಲಿಯಾರ್ ರಸ್ತೆ,
  3. ಸೆಂಟ್ ಜಾನ್ಸ್ ರಸ್ತೆ,
  4. ಸೆಂಟ್ ಜಾನ್ಸ್ ಚರ್ಚ್ ರಸ್ತೆ,
  5. ಅಸ್ಸಯೇ ರಸ್ತೆ, ವೀಲ್ಡರ್ಸ್ ರಸ್ತೆ,
  6. ಅಜಂತಾ ರಸ್ತೆ,
  7. ಕಾಮರಾಜರಸ್ತೆ
  8. ಕಸ್ತೂರಿಬಾ ರಸ್ತೆ, (ಹಡ್ಲನ್ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ)
  9. ಎಂ.ಜಿ.ರಸ್ತೆ, (ಕ್ಲೀನ್ಸ್ ವೃತ್ತದಿಂದ ವೆಬ್ ಜಂಕ್ಷನ್ ವರೆಗೆ ಎರಡೂ ಬದಿ)
  10. ಡಿಕನ್ಸನ್ ರಸ್ತೆ (ವೆಬ್ ಜಂಕ್ಷನ್ ನಿಂದ ಹಲಸೂರು ರಸ್ತೆ ವರೆಗೆ)
  11. ಕಬ್ಬನ್ರಸ್ತೆ (ಮಣಿಪಾಲ್ ಸೆಂಟರ್ ನಿಂದ ಸಿ.ಟಿ.ಓ. ವೃತ್ತದ ವರೆಗೆ)
  12. ಸೆಂಟ್ರಲ್ ಸ್ಟ್ರೀಟ್.
  13. ಕ್ರೀನ್ರಸ್ತೆ, (ಬಾಳೇಕುಂದ್ರಿ ವೃತ್ತ ದಿಂದ ಕ್ಲೀನ್ಸ್ ವೃತ್ತದ ವರೆಗೆ)
  14. ರಾಜಭವನ ರಸ್ತೆ, (ಸಿ.ಟಿ.ಓ. ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ)
  15. ಇನ್ಫೆಂಟ್ರಿರಸ್ತೆ, (ರಾಜಭವನ ವೃತ್ತದಿಂದ ಟ್ರಾಫಿಕ್ ಹೆಡ್ ಕ್ವಾಟ್ರರ್ಸ್ ವೃತ್ತದವರೆಗೆ)
  16. ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ, (ಕೆ ಆರ್ ಸರ್ಕಲ್ನಿಂದ ಬಾಳೇಕುಂದ್ರಿ ವೃತ್ತದ ವರೆಗೆ)
  17. ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು/ ಸುತ್ತಮುತ್ತಲಿನ ರಸ್ತೆಗಳು
  18. ವೈದೇಹಿ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ವೃತ್ತದ ವರೆಗೆ
  19. ಆರ್.ಆರ್.ಎಂ.ಆರ್. ರಸ್ತೆ, ರಿಚ್ಚಂಡ್ ಜಂಕ್ಷನ್ನಿಂದ ಹಡ್ನನ್ ವೃತ್ತದ ವರೆಗೆ
    ವಾಹನ ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು : (ಬೆಳಗ್ಗೆ 05:00 ರಿಂದ 10:00 ಗಂಟೆಯವರೆಗೆ)
    ನಾಗಾ ಜಂಕ್ಷನ್ನಿಂದ ಶ್ರೀ ಸರ್ಕಲ್ ಕಡೆಗೆ ಸೆಂಟ್ ಜಾನ್ಸ್ ರಸ್ತೆ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳು.
    ವಾರ್ ಮೆಮೋರಿಯಲ್ ಜಂಕ್ಷನ್ನಿಂದ ಆರ್.ಬಿ.ಐ ಸರ್ಕಲ್ ಕಡೆಗೆ ಅಣ್ಣಸ್ವಾಮಿ ಮುದಲಿಯಾರ್ ರಸ್ತೆ ಮೂಲಕ ಸಂಚರಿಸುವ ಎಲ್ಲಾ ರೀತಿಯ ವಾಹನಗಳು.

ಭಾರೀ ವಾಹನಗಳ ಮಾರ್ಗ ಬದಲಾವಣೆ :

  1. ಮೈಸೂರು ರಸ್ತೆ ಯಿಂದ ಎಂ.ಜಿ. ರಸ್ತೆ / ಹಳೆ ಮದ್ರಾಸ್ ರಸ್ತೆ ಕಡೆಗೆ ಪ್ರವೇಶಿಸುವ ಟೆಂಪೋ, ಸರಕು ಸಾಗಾಣಿಕಾ ವಾಹನಗಳು ಹಾಗೂ ಇತರೆ ವಾಹನಗಳು ಹಡ್ನನ್ ವೃತ್ತದಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ದೇವಾಂಗ ರಸ್ತೆ-ದೇವಾಂಗ ಜಂಕ್ಷನ್ – ಮಿಷನ್‌ ರಸ್ತೆ, ರಿಚ್ ಮಂಡ್ ಮೇಲು ಸೇತುವೆ. ರೆಸಿಡೆನ್ಸಿ ರಸ್ತೆಯಲ್ಲಿ, ಕ್ಯಾಷ್ ಫಾರ್ಮಸಿ, ಅಪೇರಾ ಜಂಕ್ಷನ್, ಮೊಯೋಹಾಲ್, ಕಮೀಷನರೇಟ್ ರಸ್ತೆ, ಗರುಡಾ ಮಾಲ್, ಹಾಸ್ಕೆಟ್ ಆಸ್ಪತ್ರೆ ಮೂಲಕ ಮುಂದೆ ಹೋಗಬಹುದಾಗಿದೆ.
  2. ಬಳ್ಳಾರಿ ರಸ್ತೆ ಮತ್ತು ಮೇದ್ರಿ ರಸ್ತೆ ಕಡೆಯಿಂದ ನಗರಕ್ಕೆ ಪ್ರವೇಶಿಸುವ ಟೆಂಪೋ, ಸರಕು ಸಾಗಾಣಿಕಾ ವಾಹನಗಳು ಹಾಗೂ ಇತರೆ ವಾಹನಗಳು ಹಳೆ ಉದಯಾ ಟಿವಿ ಕಛೇರಿ ಜಂಕ್ಷನ್ ಮೂಲಕ ನೃಪತುಂಗ ರಸ್ತೆಯನ್ನು ತಲುಪಿ ಹಡ್ನನ್ ರಸ್ತೆ ಮೂಲಕ ಮುಂದೆ ಹೋಗಬಹುದಾಗಿದೆ.
  3. ಹಳೆ ಮದ್ರಾಸ್ ರಸ್ತೆ, ವರ್ತೂರು ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ವಾಹನಗಳು ಸುರಂಜನ್ ದಾಸ್‌ರಸ್ತೆ ಮೂಲಕ ಹಳೇ ಏರ್ ಪೋರ್ಟ್ ರಸ್ತೆ ಸೇರಿ ಮುಂದಕ್ಕೆ ಸಾಗಬಹುದಾಗಿದೆ. ಅದೇ ರೀತಿ ಹಲಸೂರು ಕೆರೆ ಕಡೆಯಿಂದ ಸೆಂಟ್ ಜಾನ್ ರಸ್ತೆ ಮೂಲಕ ಕಂಟೋನ್‌ಮೆಂಟ್ ರೈಲ್ವೇ ನಿಲ್ದಾಣ. ಜಯಮಹಲ್ ರಸ್ತೆ ಮುಖಾಂತರ ಮೇಬ್ರಿ ವೃತ್ತ ತಲುಪಿ ಮುಂದೆ ಸಾಗಬಹುದಾಗಿದೆ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read