BIG NEWS : ರಾಜ್ಯದ ಶಾಲೆಗಳಿಗೆ ಒದಗಿಸಿರುವ ಮೂಲಸೌಕರ್ಯಗಳ ವಿವರಗಳನ್ನು ‘SATS’ ನಲ್ಲಿ ಇಂದೀಕರಿಸುವಂತೆ ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ಶಾಲೆಗಳಿಗೆ ಒದಗಿಸಿರುವ ಮೂಲಸೌಕರ್ಯಗಳ ವಿವರಗಳನ್ನು SATS ನಲ್ಲಿ ಇಂದೀಕರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

2005-06 ನೇ ಸಾಲಿನಿಂದ ಪ್ರಸ್ತುತ ಸಾಲಿನವರೆಗೆ ವರೆಗೆ ಶಾಲೆಗೆ ವಿವಿಧ ಯೋಜನೆಗಳಡಿ ಒದಗಿಸಿರುವ ಮೂಲಸೌಕರ್ಯಗಳ ವಿವರಗಳಾದ ಭೌತಿಕ ಹಾಗೂ ಆರ್ಥಿಕ ಸೌಲಭ್ಯಗಳು ಮಾಹಿತಿಯನ್ನು ನಿಖರವಾಗಿ SATS ತಂತ್ರಾಂಶದಲ್ಲಿ ಇಂದೀಕರಿಬೇಕಾಗಿದೆ.

ಆದ್ದರಿಂದ ಈ ಉದ್ದೇಶಕ್ಕಾಗಿ ಸದರಿ ಅಂಶಗಳನ್ನು ಇಂದೀಕರಿಸಲು School Assets ಎಂಬ ಹೊಸ ಮನು ಅನ್ನು SATS ತಂತ್ರಾಂಶದಲ್ಲಿ ಸೃಜಿಸಲಾಗಿದೆ. ಈ ಮೆನುವಿನಲ್ಲಿ ಸಂಬಂಧಿಸಿದ ಶಾಲೆಗಳ ಈ ಕೆಳಕಂಡ ಮಾಹಿತಿಗಳನ್ನು ವರ್ಷವಾರು ಪ್ರತ್ಯೇಕವಾಗಿ ಮತ್ತು ಸಂಪೂರ್ಣವಾಗಿ ದಿನಾಂಕ-30-04-2025 ರೊಳಗೆ ನಮೂದಿಸಲು ಶೀರ್ಘವಾಗಿ ಅಗತ್ಯ ಕ್ರಮವಹಿಸಲು ತಿಳಿಸಿದೆ.

ನಮೂದಿಸಬೇಕಾದ ಮಾಹಿತಿಗಳು ಈ ಕೆಳಕಂಡಂತಿವೆ:
1.ಹೊಸ ಕೊಠಡಿಗಳ ನಿರ್ಮಾಣದ ವಿವರ
2 ಮೈನರ್ ಹಾಗೂ ಮೇಜರ್ ದುರಸ್ತಿ ಕಾರ್ಯಗಳ ವಿವರ
3 ಶೌಚಾಲಯ ನಿರ್ಮಾಣದ ವಿವರ
4 ಪೀಠೋಪಕರಣಗಳ ವಿವರ

  1. ಶಾಲೆಗಳಿಗೆ ವಿವಿಧ ಯೋಜನೆಯಡಿ ಮಂಜೂರಾದ ಬಿಡಗಡೆ ಹಾಗು ವೆಚ್ಚವಾದ ಅನುದಾನದ ವಿವಿರ
    ಮೇಲ್ಕಂಡ ಮಾಹಿತಿಯನ್ನು ಅಪ್ಡೇಟ್ ಮಾಡುವಾಗ ಯಾವುದೇ ತೊಂದರೆ ಅಥವಾ ತಾಂತ್ರಿಕ ಸಮಸ್ಯೆಗ ಉಂಟಾದಲ್ಲಿ E-mail ವಿಳಾಸ ಗೆ cpisatskarnataka@gmail.com ಗೆ ಸಂಪರ್ಕಿಸಲು ತಿಳಿಸಿದೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read