ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ ನಲ್ಲಿಡುವುದಾಗಿ ಸಿಎಂ, ಡಿಸಿಎಂಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ವಶಕ್ಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿ ಇ-ಮೇಲ್ ಕಳುಹಿಸಿದ್ದ ಕಿಡಿಗೇಡಿಯನ್ನು ವಿಧಾನಸೌಧ ಠಾಣೆ ಪೋಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಂಧೂರ್ ರಜಪೂತ್ ಹೆಸರಿನಲ್ಲಿ ಮಂಗಳವಾರ ಆರೋಪಿ ಇ-ಮೇಲ್ ಕಳುಹಿಸಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಹಣಕಾಸು ವಿಚಾರವಾಗಿ ಸ್ನೇಹಿತನೊಂದಿಗೆ ಮನಸ್ತಾಪ ಹೊಂದಿದ್ದ ಆರೋಪಿ ಇದರಿಂದ ಬೇಸತ್ತು ಸಿಎಂ ಮತ್ತು ಡಿಸಿಎಂಗೆ ಜೀವ ಬೆದರಿಕೆ ಇ-ಮೇಲ್ ಕಳುಹಿಸಿ ಕುಚೋದ್ಯ ಮಾಡಿದ್ದಾನೆ. ಸಿಎಂ ಮತ್ತು ಡಿಸಿಎಂ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಟ್ರ್ಯಾಲಿ ಬ್ಯಾಗಿನಲ್ಲಿ ತುಂಬಿ ಫ್ರಿಜ್ ನಲ್ಲಿ ಇಡುವುದಾಗಿ ಆರೋಪಿ ಬೆದರಿಸಿದ್ದ ಎಂದು ಹೇಳಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read