ಕಲಬುರಗಿ, ಬೀದರ್ ನಲ್ಲಿ ಸತತ ಎರಡನೇ ದಿನವೂ 44.5 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳು ಸೇರಿದಂತೆ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ತಾಪಮಾನ 40 ರಿಂದ 44.5 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದ್ದು, ಭಾರೀ ತಾಪಮಾನದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದಾದ ನಿಂಬರ್ಗಾ ತಾಂಡಾ ಮತ್ತು ಬೀದರ್ ನ ದಬಕ ಹೋಬಳಿಯಲ್ಲಿ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಯಚೂರು ಮತ್ತು ಯಾದಗಿರಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್, ಬಳ್ಳಾರಿಯಲ್ಲಿ 41.3 ಡಿ.ಸೆ., ಕೊಪ್ಪಳ 40.5 ಡಿ.ಸೆ., ವಿಜಯಪುರ 42.8 ಡಿ.ಸೆ., ಬೆಳಗಾವಿ 41.9 ಡಿ.ಸೆ.,ಡಿ ಬಾಗಲಕೋಟೆ 41.4 ಡಿ.ಸೆ., ಗದಗ 40.7 ಡಿ.ಸೆ., ಧಾರವಾಡ 40 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಕಳೆದು ಒಂದು ವಾರದಿಂದ ಕಲಬುರಗಿಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಈಗ 44.5 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ತಾಪಮಾನದ ಭಾರಿ ಏರಿಕೆಯಿಂದಾಗಿ ಜನ ಜಾನುವಾರು ತತ್ತರಿಸಿ ಹೋಗಿದ್ದಾರೆ.