ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳನ್ನು ವರ್ಗಾಅವಣೆ ಮಾಡಿರುವುದನ್ನು ವಿರೋಧಿಸಿ ವಕೀಲರು ಪ್ರತಿಭಟನೆ ನಡೆಸಿದ್ದಾರೆ.
ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್, ಹೇಮಂತ್ ಚಂದನಗೌಡರ್, ಕೆ.ನಟರಾಜನ್ ಹಾಗೂ ಎಸ್.ಎಸ್.ಸಂಜಯ್ ಗೌಡ ಅವರ ವರ್ಗಾವಣೆಗೆ ವಿರೋಧಿಸಿ ಬೆಂಗಳೂರು ವಕೀಲರ ಸಂಘ, ಹೈಕೋರ್ಟ್ ನ ಎಲಾ ಹಿರಿಯ ಹಾಅಗೂ ಕಿರೀಯ ವಕೀಲರು ಪ್ರತಿಭಟನೆ ಆರಂಭಿಸಿದ್ದಾರೆ.
ಹೈಕೋರ್ಟ್ ನ ಗೋಲ್ಡನ್ ಗೇಟ್ ಮುಂಭಾಗ ನಮಗೆ ನ್ಯಾಯಬೇಕು ಎಂಬ ಘೋಷವಾಕ್ಯದೊಂದಿಗೆ ಧರಣಿ ನಡೆಸಿದ್ದಾರೆ. ಅಲ್ಲದೇ ವಕೀಲರು ಹೈಕೋರ್ಟ್ ಕಲಾಪದಿಂದ ಒಂದು ಗಂಟೆ ಕಾಲ ಹೊರಗುಳಿದು ಪ್ರತಿಭಟನೆ ನಡೆಸಿದ್ದು, ಹೈಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.