ಬೆಂಗಳೂರು : ಬೆಂಗಳೂರಿನಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ‘ವಿಂಗ್ ಕಮಾಂಡರ್’ ಬಂಧನಕ್ಕೆ ಕನ್ನಡಿಗರು ಪಟ್ಟು ಹಿಡಿದಿದ್ದು, ‘ಅರೆಸ್ಟ್ ಶಿಲಾದಿತ್ಯ’ ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.
ಹೌದು, ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಹೊಸ ಕಥೆ ಕಟ್ಟಿದ್ದ ಶಿಲಾದಿತ್ಯ ಬೋಸ್ ಮೇಲೆ ಕನ್ನಡಿಗರು ಕೆಂಡಕಾರಿದ್ದಾರೆ. ಹಲ್ಲೆಗೊಳಗಾದ ಯುವಕ ದೂರು ನೀಡಿದ್ದಾನೆ, ಈ ಕೂಡಲೇ ಶಿಲಾದಿತ್ಯ ಬೋಸ್ ನನ್ನು ಬಂಧಿಸಬೇಕು ಎಂದು ಕನ್ನಡಿಗರು ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.
ಹಲ್ಲೆ ಮಾಡಿದ ಪಶ್ಚಿಮ ಬಂಗಾಳ ಮೂಲದ ವಿಂಗ್ ಕಮಾಂಡರ್ ವಿರುದ್ಧ ಸದ್ಯ ಎಫ್ ಐ ಆರ್ ದಾಖಲಾಗಿದೆ. ಹಲ್ಲೆಗೊಳಗಾದ ಕನ್ನಡಿಗರ ವಿಕಾಸ್ ಕುಮಾರ್ ನೀಡಿದ ಪ್ರತಿ ದೂರಿನ ಮೇರೆಗೆ ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
The mother of the biker who was arrested has finally spoken out, shedding light on how her son was falsely accused by a DRDO-IAF Wing Commander. In her emotional statement, she explains how the officer twisted the entire narrative, manipulating facts to portray her innocent son… pic.twitter.com/F8G352cD3l
— Karnataka Portfolio (@karnatakaportf) April 21, 2025
ಡಿಆರ್ಡಿಒ-ಐಎಎಫ್ ವಿಂಗ್ ಕಮಾಂಡರ್ ತನ್ನ ಮಗನ ಮೇಲೆ ಹೇಗೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂಬುದರ ಬಗ್ಗೆ ಬೈಕ್ ಸವಾರನ ತಾಯಿ ಕೊನೆಗೂ ಮಾತನಾಡಿದ್ದಾರೆ. ತನ್ನ ಭಾವನಾತ್ಮಕ ಹೇಳಿಕೆಯಲ್ಲಿ, ಅಧಿಕಾರಿ ಇಡೀ ಘಟನೆಯನ್ನು ಹೇಗೆ ತಿರುಚಿದರು, ತನ್ನ ಮುಗ್ಧ ಮಗನನ್ನು ತಪ್ಪಿತಸ್ಥನೆಂದು ಚಿತ್ರಿಸಲು ಸತ್ಯಗಳನ್ನು ಹೇಗೆ ತಿರುಚಿದರು ಎಂಬುದನ್ನು ಅವರು ವಿವರಿಸುತ್ತಾರೆ. ಅವರ ಪ್ರಕಾರ, ಈ ಉದ್ದೇಶಪೂರ್ವಕ ತಪ್ಪು ನಿರೂಪಣೆಯು ತನ್ನ ಮಗನಿಗೆ ಅನ್ಯಾಯದ ಶಿಕ್ಷೆಗೆ ಕಾರಣವಾಯಿತು, ಅವನು ಈಗ ಅವನು ಮಾಡದ ಅಪರಾಧದ ಪರಿಣಾಮಗಳನ್ನು ಅನುಭವಿಸುತ್ತಿದ್ದಾನೆ. ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸಿ ಸತ್ಯ ಬೆಳಕಿಗೆ ಬರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
#Fakevictimhoodexposed
— Karnataka Portfolio (@karnatakaportf) April 21, 2025
The CCTV footage has completely exposed the misleading and fabricated narrative put forth by Wing Commander Shiladitya Bose. The video clearly shows him brutally attacking a Swiggy delivery boy at Tin Factory Junction in Bengaluru an act that continued… pic.twitter.com/A65b2gJWYU