HomeLatest NewsBIG NEWS: ಇನ್ನು ವಾಹನಗಳಿಗೆ ಕೊಳಲು, ತಬಲಾ ಸೇರಿ ಸಂಗೀತ ವಾದ್ಯಗಳ ಹಾರ್ನ್ ಕಡ್ಡಾಯ ಕಾನೂನು...

BIG NEWS: ಇನ್ನು ವಾಹನಗಳಿಗೆ ಕೊಳಲು, ತಬಲಾ ಸೇರಿ ಸಂಗೀತ ವಾದ್ಯಗಳ ಹಾರ್ನ್ ಕಡ್ಡಾಯ ಕಾನೂನು ಜಾರಿಗೆ ಚಿಂತನೆ

ನವದೆಹಲಿ: ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ವಾಹನಗಳ ಹಾರ್ನ್ ಆಗಿ ಬಳಕೆ ಮಾಡಲು ಅನುವಾಗುವಂತೆ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ ಮೊದಲಾದ ವಾದ್ಯಗಳ ಶಬ್ದ ಕಿವಿಗೆ ಇಂಪಾಗಿರುತ್ತದೆ. ಎಲ್ಲಾ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಾಹನಗಳ ಹಾರ್ನ್ ನಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಮಾತ್ರ ಬಳಸುವಂತೆ ಕಾನೂನು ಜಾರಿಗೊಳಿಸಲು ಚಿಂತನೆ ನಡೆದಿದೆ. ತಬಲಾ, ಪಿಟೀಲು, ಕೊಳಲು, ಹಾರ್ಮೋನಿಯಂ ಸೇರಿ ಕೇಳಲು ಹಿತವೆನಿಸುವ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಹಾರ್ನ್ ಆಗಿ ಎಲ್ಲಾ ವಾಹನಗಳಲ್ಲಿ ಬಳಸುವಂತೆ ಕಾನೂನು ರೂಪಿಸಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular